ಬೈ ಎಲೆಕ್ಷನ್ ಗೌಪ್ಯ ಸಭೆ: ಅನರ್ಹ ಶಾಸಕರ ದುಂಬಾಲು, ದೆಹಲಿಗೆ ಯಡಿಯೂರಪ್ಪ ದೌಡು..!

By Ramesh B  |  First Published Sep 21, 2019, 8:40 PM IST

ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜ್ಯ ರಾಜಕಾರಣದ ಚಿತ್ರಣ ಬದಲಾಗಿದ್ದು, ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಇನ್ನು ಸಿಎಂ ಅನರ್ಹ ಶಾಸಕ ಜತೆ ಗುಪ್ತ್-ಗುಪ್ತ್ ಮೀಟಿಂಗ್ ಮಾಡಿ ಏಕಾಏಕಿ ದೆಹಲಿಗೆ ಹಾರಿದ್ದಾರೆ.


ಬೆಂಗಳೂರು, [ಸೆ.21]:  ಮಸ್ಕಿ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರ ಹೊರತುಪಡಿಸಿ ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದೇ ತಡ ರಾಜ್ಯ ರಾಜಕಾರಣದ ಚಿತ್ರಣವೇ ಬದಲಾಗಿದೆ.

ಜೆಡಿಎಸ್, ಕಾಂಗ್ರೆಸ್ ಹಾಗೂ ಆಡಳಿತರೂಢ ಬಿಜೆಪಿ ನಾಯಕರು ಸಭೆ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ. ಅದರಲ್ಲೂ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅನರ್ಹ ಶಾಸಕರೊಂದಿಗೆ ಗೌಪ್ಯ ಸಭೆ ನಡೆಸಿ ಬಳಿಕ ದಿಢೀರ್ ದೆಹಲಿಯತ್ತ ಪ್ರಯಾಣ ಬೆಳೆಸಿರುವುದು ಭಾರೀ ಕುತೂಹಲ ಮೂಡಿಸಿದೆ.

Tap to resize

Latest Videos

ಬೈ ಎಲೆಕ್ಷನ್: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಇಲ್ಲಿದೆ

ಬೈ ಎಲೆಕ್ಷನ್ ಘೋಷಣೆ ಆಗಿದ್ದೇ ತಡ ಆತಂಕಗೊಂಡಿರುವ  17 ಕಾಂಗ್ರೆಸ್-ಜೆಡಿಎಸ್  ಅನರ್ಹ ಶಾಸಕರು ಸಿಎಂ ಬಿ.ಎಸ್​. ಯಡಿಯೂರಪ್ಪ ಮೊರೆ ಹೋಗಿದ್ದು, ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಸಿಎಂ ಜತೆ ಸಭೆ ನಡೆಸಿದರು. 

ಈ ಸಂಬಂಧ ಯಡಿಯೂರಪ್ಪ ಇಂದಿನ ತಮ್ಮೆಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬೆಂಗಳೂರಿನ ಸದಾಶಿವನಗರದ ಸ್ಯಾಂಕಿ ಕೆರೆ ಪಕ್ಕದಲ್ಲಿರುವ ಅರಣ್ಯ ಇಲಾಖೆ ಗೆಸ್ಟ್​ ಹೌಸ್​ನಲ್ಲಿ ಗುಪ್ತ್-ಗುಪ್ತ್ ಸಭೆ ನಡೆಸಿದರು. 

ಕರ್ನಾಟಕ 15 ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಫಿಕ್ಸ್!: ಅನರ್ಹರಿಗೆ ಟೆನ್ಶನ್

ಸುಪ್ರೀಂಕೋರ್ಟ್​ ತೀರ್ಪು ಬರುವವರೆಗೆ ಅನರ್ಹ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಸ್ಥಿತಿ ಡೋಲಾಯಮಾನವಾಗಿದ್ದು, ಈ ಕುರಿತು ಸಭೆಯಲ್ಲಿ ಯಡಿಯೂರಪ್ಪ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.  

ನಮ್ಮ ರಾಜಕೀಯ ಭವಿಷ್ಯವೇ ಹಾಳಾಗಿ ಹೋಯ್ತು. ನಿಮ್ಮನ್ನು ನಂಬಿಕೊಂಡು ಬಂದು ಬೀದಿಪಾಲಾಗಿದ್ದೇವೆ ಅಂತೆಲ್ಲಾ ಸಭೆಯ ಇನ್ ಸೈಡ್ ನಲ್ಲಿ  ಅನರ್ಹ ಶಾಸಕರು ಬಿಎಸ್​ವೈ ಮುಂದೆ ಗೋಳಾಡಿದರು ಎಂದು ತಿಳಿದುಬಂದಿದೆ. 

ಬೈ ಎಲೆಕ್ಷನ್‌ಗೆ ಅನರ್ಹರು ಸ್ಪರ್ಧಿಸಲು ಅವಕಾಶ ಇದ್ಯಾ? ಇಲ್ಲ?: ಸಂಪೂರ್ಣ ಮಾಹಿತಿ

ಸಭೆಗೆ ಅಡ್ವೋಕೇಟ್​ ಜನರಲ್ ಬುಲಾವ್​
 ಅನರ್ಹ ಶಾಸಕರ ಗೋಳಾಟವನ್ನು ನೋಡಕಾಗದೇ ಬಿಎಸ್ ವೈ ಆಗಿಂದಾಗಲೇ ಗೆಸ್ಟ್​ ಹೌಸ್​ಗೆ ಅಡ್ವೋಕೇಟ್​ ಜನರಲ್​ ಪ್ರಭುಲಿಂಗ ನಾವಡಗಿ ಅವರನ್ನ ಕರೆಸಿಕೊಂಡಿದ್ದು,  ಅವರೊಂದಿಗೆ ಅನರ್ಹ ಶಾಸಕರ ಕಾನೂನು ಹೋರಾಟದ ಕುರಿತು ಮತ್ತು ಸುಪ್ರೀಂ ಕೋರ್ಟ್​ನಲ್ಲಿರುವ ಅರ್ಜಿ ವಿಚಾರಣೆ ಕುರಿತು ಚರ್ಚಿಸಿದರು. ಇದೇ  ವೇಳೆ ಕಾನೂನು ಹೋರಾಟ ಮಾಡೋಣ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಅನರ್ಹ ಶಾಸಕರಿಗೆ ಬಿಎಸ್​ವೈ ಭರವಸೆ ನೀಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಬಿಎಸ್ ವೈ ದಿಢೀರ್ ದೆಹಲಿಗೆ ದೌಡು
ದಿಢೀರ್ ಉಪಚುನಾವಣೆ ಘೋಷಣೆ ಬೆನ್ನಲ್ಲೇ  ಅನರ್ಹ ಶಾಸಕರು ಬಿಎಸ್ ವೈ ದುಂಬಾಲು ಬಿದ್ದಿದ್ದಾರೆ. ಇದರಿಂದ ಏನು ತೋಚದೇ ಯಡಿಯೂರಪ್ಪ ದಿಢೀರ್ ದೆಹಲಿಗೆ ಹಾರಿದ್ದು, ಅನರ್ಹ ಶಾಸಕರು ಮತ್ತು ಉಪ‌ಚುನಾವಣೆ ಕುರಿತು ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿವೆ.

ಅನರ್ಹ ಶಾಸಕರನ್ನೂ ದೆಹಲಿಗೆ ಕರೆದೊಯ್ದ BSY
ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಲು ಕೆಲ ಅನರ್ಹ ಶಾಸಕರನ್ನು ಜತೆಯಲ್ಲೇ ಕರೆದುಕೊಂಡು ದೆಹಲಿಗೆ ತೆರಳಿದ್ದಾರೆ. ರಾಷ್ಟ್ರೀಯ ನಾಯಕರೊಂದಿಗೆ ಚರ್ಚೆ ನಡೆಸಿ ಅನರ್ಹ ಶಾಸಕರ ರಾಜಕೀಯ ಭವಿಷ್ಯದ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಜತೆಗೆ ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ವಕೀಲ ಮುಕುಲ್​ ರೋಹ್ಟಗಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಇನ್ನು ಸಿಎಂ ಜತೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್​ ಸವದಿ ಸಹ ದೆಹಲಿಗೆ ಪ್ರಯಾಣಿಸಿದ್ದಾರೆ.

23ಕ್ಕೆ ಅನರ್ಹ ಶಾಸಕ ರಾಜಕೀಯ ಭವಿಷ್ಯ
ಹೌದು...ಒಂದು ಕಡೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಅನರ್ಹ ಶಾಸಕರು ಈ ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಚುನಾವಣೆ ಆಯೋಗ ಸ್ಪಷ್ಟವಾಗಿ ಹೇಳಿದೆ. ಮತ್ತೊಂದೆಡೆ ಅನರ್ಹರ ಭವಿಷ್ಯ ಸುಪ್ರೀಂಕೋರ್ಟ್ ನಲ್ಲಿದ್ದು, ಸೆ.23ಕ್ಕೆ ಅಂದ್ರೆ ಸೋಮವಾರ ವಿಚಾರಣೆಗೆ ಬರಲಿದೆ. ಇದ್ರಿಂದ ಅರ್ನಹ ಶಾಸಕರಿಗೆ ದಿಕ್ಕುತೋಚದಂತಾಗಿದೆ.

ಸುಪ್ರೀಂ ಕೋರ್ಟ್ ಅನರ್ಹರು ಎಂದು ಹೇಳಬಹುದು ಇಲ್ಲ ಅರ್ಹರು ಎಂದೂ ಹೇಳಬಹುದು.  ಅಥವಾ ಇದನ್ನು ಮುಂದೂಡಲೂಬಹುದು. ಒಟ್ಟಿನಲ್ಲಿ ಸೋಮವಾರ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನ ಮೇಲೆ ಈ ಅನರ್ಹ ಶಾಸಕ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. 

ಮಸ್ಕಿ, ಆರ್‌ಆರ್‌ ನಗರಕ್ಕೆ ಏಕೆ ಬೈ ಎಲೆಕ್ಷನ್ ಇಲ್ಲ?
2018 ವಿಧಾನಸಭೆ ಚುನಾವಣೆ ವೇಳೆ ರಾಯಚೂರು ಜಿಲ್ಲೆ ಮಸ್ಕಿ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ [RR ನಗರ] ಕ್ಷೇತ್ರಗಳಲ್ಲಿ ಅಕ್ರಮ ಮತದಾನ ಮಾಡಿಸಲಾಗಿದೆ ಎನ್ನುವ ಆರೋಪ ಇದ್ದು, ಈ ಪ್ರಕರಣ ಹೈಕೋರ್ಟ್ ನಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡಿಲ್ಲ.

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ 6) ಯಶವಂತಪುರ 7) ಅಥಣಿ 8) ಕಾಗವಾಡ 9) ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ. ಇನ್ನು

ಮಹತ್ವದ ದಿನಾಂಕಗಳು
ನಾಮಪತ್ರ ಸಲ್ಲಿಕೆ ಅಧಿಸೂಚನೆ - ಸೆಪ್ಟೆಂಬರ್ 23
ನಾಮಪತ್ರ ಸಲ್ಲಿಕೆ ಅಂತ್ಯ - ಸೆಪ್ಟೆಂಬರ್ 30
ನಾಮಪತ್ರ ಪರಿಶೀಲನೆ - ಅಕ್ಟೋಬರ್ 1
ನಾಮಪತ್ರ ವಾಪಸ್: ಅಕ್ಟೋಬರ್.3
ಮತದಾನ ಅಕ್ಟೋಬರ್ 21
ಫಲಿತಾಂಶ ಅಕ್ಟೋಬರ್ 24

click me!