ಬಿಎಸ್‌ವೈ ಮಾತ್ರವಲ್ಲ, ಈ ಮೊದಲು ಇವರೂ ನಾಲ್ಕು ಬಾರಿ ಸಿಎಂ ಆಗಿದ್ರು!

By Web DeskFirst Published Jul 26, 2019, 7:07 PM IST
Highlights

ಶಿಕಾರಿಪುರದಿಂದ ಹೊರಹೊಮ್ಮಿದ ನಾಯಕ ಬಿ.ಎಸ್.ಯಡಿಯೂರಪ್ಪ ಹಸಿರು ಶಾಲು ಹೊದ್ದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಇದರೊಂದಿಗೆ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಹಾಗಾದರೆ ಏನದು ರಾಜಕಾರಣದಲ್ಲಿ ದಾಖಲೆ?

ಬೆಂಗಳೂರು[ಜು. 26]  ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜುಲೈ 26, ಶುಕ್ರವಾರ ಸಂಜೆ 6.35ಕ್ಕೆ ರಾಜ್ಯಪಾಲ ವಿಆರ್ ವಾಲಾ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು ಇದರೊಂದಿಗೆ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಯಡಿಯೂರಪ್ಪ ವ್ಯಕ್ತಿಯಾಗಿ 4ನೇ ಸಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮುನ್ನ ಎಸ್. ನಿಜಲಿಂಗಪ್ಪ 4 ಬಾರಿ ಸಿಎಂ ಆಗಿದ್ದವರು.  ಹಾಗಾದರೆ ನಿಜಲಿಂಗಪ್ಪ ಮತ್ತು ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ತೆಗೆದುಕೊಂಡ ದಿನಾಂಕಗಳನ್ನು ನೋಡಿಕೊಂಡು ಬನ್ನಿ.

ಮತ್ತೊಮ್ಮೆ ಸಿಎಂ ಆದ್ರು ಯಡಿಯೂರಪ್ಪ, ಹೊಸ ಇನಿಂಗ್ಸ್ ಆರಂಭ

 ಎಸ್. ನಿಜಲಿಂಗಪ್ಪ

1. ನವೆಂಬರ್ 01, 1956

2. ಜೂನ್ 10, 1957

3. ಜುಲೈ 22 1962

4. ಮಾರ್ಚ್ 15, 1967

ಬಿ.ಎಸ್‌.ಯಡಿಯೂರಪ್ಪ

1. ನವೆಂಬರ್ 12, 2007

2. ಮಾರ್ಚ್ 30, 2008

3. ಮೇ 17, 2018

4. ಜುಲೈ 26, 2019

 

click me!