ನಾಡಿನಲ್ಲಿ ನೀರಿಗೆ ಬರ, ಉಡುಪಿಯಲ್ಲಿ ಮೀನಿಗೆ ಬರ: ಮತ್ಸ್ಯಕ್ಷಾಮದಿಂದ ಮೀನುಗಾರರ ಪರದಾಟ

By Suvarna Web DeskFirst Published Mar 30, 2017, 10:23 PM IST
Highlights

ಮೀನುಗಾರಿಕಾ ಋತು ಆರಂಭವಾಗಿದೆ. ಆದರೂ ರಾಜ್ಯದ ಪ್ರತಿಷ್ಟಿತ ಮಲ್ಪೆ ಬಂದರಿನಲ್ಲಿ ಬಂದರುಗಳು ದಡದಲ್ಲೇ ಲಂಗರು ಹಾಕಿನಿಂತಿವೆ. ಕಾರಣ ಮೀನಿಗೆ ಬರ. ರಾಜ್ಯದಲ್ಲೆಡೆ ನೀರಿಗೆ ಹಾಹಾಕಾರವಾದರೆ, ಉಡುಪಿಯಲ್ಲಿ ಮೀನಿಗೆ ಬರ ಬಂದಿದೆ. ಸರಿಯಾದ ತೂಫಾನ್ ಆಗಿಲ್ಲ ಹೀಗಾಗೇ ಮತ್ಸ್ಯಕ್ಷಾಮ ಉಂಟಾಗಿದೆ ಎಂದು ಕೆಲವರ ವಾದ. ಮೀನುಗಾರಿಕೆಯಲ್ಲಿನ ಹೊಸ ಹೊಸ ಪರಿಕ್ರಮ ಅನ್ವೇಷಣೆಯೂ ಇದಕ್ಕೆ ಕಾರಣ ಇರಬಹುದು ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ. ಮೀನಿಗೆ ಬರದಿಂದ ಸಾವಿರಾರು ಕೋಟಿ ವ್ಯವಹಾರ ನಡೆಸುವ ಮೀನುಗಾರಿಕಾ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಉಡುಪಿ(ಮಾ.31): ಮೀನುಗಾರಿಕಾ ಋತು ಆರಂಭವಾಗಿದೆ. ಆದರೂ ರಾಜ್ಯದ ಪ್ರತಿಷ್ಟಿತ ಮಲ್ಪೆ ಬಂದರಿನಲ್ಲಿ ಬಂದರುಗಳು ದಡದಲ್ಲೇ ಲಂಗೂರು ಹಾಕಿನಿಂತಿವೆ. ಕಾರಣ ಮೀನಿಗೆ ಬರ. ರಾಜ್ಯದಲ್ಲೆಡೆ ನೀರಿಗೆ ಹಾಹಾಕಾರವಾದರೆ, ಉಡುಪಿಯಲ್ಲಿ ಮೀನಿಗೆ ಬರ ಬಂದಿದೆ. ಸರಿಯಾದ ತೂಫಾನ್ ಆಗಿಲ್ಲ ಹೀಗಾಗೇ ಮತ್ಸ್ಯಕ್ಷಾಮ ಉಂಟಾಗಿದೆ ಎಂದು ಕೆಲವರ ವಾದ. ಮೀನುಗಾರಿಕೆಯಲ್ಲಿನ ಹೊಸ ಹೊಸ ಪರಿಕ್ರಮ ಅನ್ವೇಷಣೆಯೂ ಇದಕ್ಕೆ ಕಾರಣ ಇರಬಹುದು ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ. ಮೀನಿಗೆ ಬರದಿಂದ ಸಾವಿರಾರು ಕೋಟಿ ವ್ಯವಹಾರ ನಡೆಸುವ ಮೀನುಗಾರಿಕಾ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಲೀಟರ್ ಡೀಸೆಲ್ ದರ 54 ರೂಪಾಯಿಯಿಂದ 63ಕ್ಕೆ ಏರಿಕೆಯಾಗಿದೆ. ಮೀನುಗಳೇ ಸಿಗದ ಈ ಸಮಯದಲ್ಲಿ ಬೋಟ್​ಗಳನ್ನ ಸಮುದ್ರಕ್ಕಿಳಿಸಿದರೆ ಡೀಸೆಲ್ ಖರ್ಚು ಹೊಂದಿಸುವುದು ಕಷ್ಟವೇ ಎನ್ನುವುದು ಮೀನುಗಾರರ ವಾದ. ಇದೇ ಕಾರಣಕ್ಕೆ ಮಲ್ಪೆ ಬಂದರಿನಲ್ಲಿರುವ ಸುಮಾರು 1200 ಆಳಸಮುದ್ರ ಬೋಟ್'​ಗಳಲ್ಲಿ. ಶೇ. 70 ರಷ್ಟು ಬೋಟ್'ಗಳು ಬಂದರಿನಲ್ಲೇ ಲಂಗರು ಹಾಕಿವೆ.

ಒಟ್ಟಿನಲ್ಲಿ ಮೀನುಗಾರಿಕೆಯನ್ನೇ ನಂಬಿ ಬದುಕುವ ಸಾವಿರಾರು ಕುಟುಂಬಗಳು ಆತಂಕದಲ್ಲಿವೆ. ಮತ್ಸ್ಯಕ್ಷಾಮದಿಂದ ಕಂಗಾಲಾಗಿದ್ದ ಮೀನುಗಾರರಿಗೆ ಇಂಧನ ದರ ಏರಿಕೆಯೂ ಶಾಕ್ ನೀಡಿದೆ.

 

click me!