
ವ್ಯಕ್ತಿಯೋಬ್ಬನನ್ನ ಅಕ್ರಮವಾಗಿ ಬಂಧನ ಮಾಡಿದ ಹಿನ್ನೆಲೆಯಲ್ಲಿ ಐವರು ಪೊಲೀಸರ ವಿರುದ್ದ ತನಿಖೆಗೆ ನ್ಯಾಯಾಲಯ ಆದೇಶಿಸಿದೆ. ಶಬೀರ್ ಹುಸೇನ್ ಎಂಬಾತನನನ್ನು ಅಕ್ರಮವಾಗಿ ಬಂಧಿಸಿ ಹಿಂಸೆ ನೀಡಿದ ಆರೋಪ ಪೊಲೀಸರ ಮೇಲಿತ್ತು. ಸಿಸಿಬಿ ಡಿಸಿಪಿ ಆಗಿದ್ದ ದೇವರಾಜ್, ನಿವೃತ್ತ ಎಸಿಪಿ ಸಿದ್ದಪ್ಪ, ಸಬ್-ಇನ್ಸ್ಪೆಕ್ಟರ್ ದೀಪಕ್ ಸೇರಿದಂತೆ ಐದು ಮಂದಿ ಪೊಲೀಸರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಶಬೀರ್ ಹುಸೇನ್ ಬಳಿಯಿದ್ದ, ದಾಖಲಾತಿಗಳನ್ನ ಪಡೆಯಲು ಸಿಸಿಬಿ ಪೊಲೀಸರ ತಂಡ, 2013ರ ಫೆಬ್ರವರಿಯಲ್ಲಿ ಡಿಕಸನ್ ರಸ್ತೆಯಲ್ಲಿರುವ ಶಬೀರ್ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿತ್ತು. ಶಬೀರ್ ನನ್ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದ, ಪೊಲೀಸರು ನಾಲ್ಕು ದಿನಗಳ ಕಾಲ ಅಕ್ರಮವಾಗಿ ಗೃಹ ಬಂದನದಲ್ಲಿಟ್ಟಿದ್ದರು. ಶಬೀರ್ ಸಹೋದರ ಹುಸೇನ್ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದಾಗ ಪೊಲೀಸರು ಆತನನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಕಳ್ಳತನ ಪ್ರಕರಣದ ಆರೋಪ ಹೊರಿಸಿದ್ದ ಸಿಸಿಬಿ ಪೊಲೀಸರು ಆರೋಪವನ್ನ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ 3ನೇ ಎಸಿಎಂಎಂ ನ್ಯಾಯಾಲಯ ಐವರು ಆರೋಪಿಗಳ ವಿರುದ್ದ ಐಪಿಸಿ 120 (ಬಿ), 220, 323, 330 ಮತ್ತು 348 ಸೆಕ್ಷನ್ಗಳ ಅನ್ವಯ ತನಿಖೆ ಮಾಡಲು ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.