ಸಾವಿನ ಕದ ತಟ್ಟುತ್ತಿದ್ದ ಮಗುವನ್ನು ಕಾಪಾಡಿದ ಅಮ್ಮ!

By Web Desk  |  First Published Jun 26, 2019, 4:26 PM IST

ತಾಯಿ ಮಡಿಲಿಗಿಂತ ಹೆಚ್ಚು ಸೇಫ್ ಜಾಗ ಬೇರೊಂದಿಲ್ಲ| ಅಕ್ಕರೆ, ಆರೈಕೆ, ಕಾಳಜಿಗೆ ಮತ್ತೊಂದು ಹೆಸರೇ ಅಮ್ಮ| ಅಮ್ಮನ ಪ್ರೀತಿ, ಧೈರ್ಯಕ್ಕೆ ಸಾಕ್ಷಿ ಎಂಬಂತಿದೆ ಈ ವಿಡಿಯೋ| ಸಾವಿನ ಕದ ತಟ್ಟುತ್ತಿದ್ದ ಮಗುವನ್ನು ಕಾಪಾಡಿದ ತಾಯಿ


ನವದೆಹಲಿ[ಜೂ.26]: ಅಮ್ಮ ಅಂದ್ರೆ ಮಮತೆ, ಅಕ್ಕರೆ, ಆರೈಕೆ, ರಕ್ಷಣೆ. ಆಕೆ ಹತ್ತಿರವಿದ್ದರೆ ಅದೆಷ್ಟೇ ದೊಡ್ಡ ಆಪತ್ತು ಬಂದರೂ ತಡೆಯುತ್ತಾಳೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಕೂಡಾ ಅಮ್ಮನ ಪ್ರೀತಿ, ಕಾಳಜಿಗೆ ಸಾಕ್ಷಿ ಎಂಬಂತಿದೆ. ಹೌದು ನಾಲ್ಕನೇ ಮಹಡಿಯಿಂದ ಕೆಳಗೆ ಬೀಳಲಿದ್ದ ಮಗುವನ್ನು ಕಾಪಾಡುವ ಮೂಲಕ ತನ್ನ ಕಂದನಿಗೆ ನಾನು ಯಾವತ್ತೂ ರಕ್ಷಣೆ ಒದಗಿಸುತ್ತೇನೆ ಎಂಬ ಸಂದೇಶ ಸಾರಿದ್ದಾಳೆ.

ಕೊಲಂಬಿಯಾದ ಸಿಸಿಟಿವಿ ದೇಶ್ಯವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ ಮಗುವಿನೊಂದಿಗೆ ಲಿಫ್ಟ್ ನಿಂದ ಹೊರ ಬರುತ್ತಿರುತ್ತಾಳೆ, ಈ ವೇಳೆ ಓರ್ವ ಡೆಲಿವರಿ ಬಾಯ್ ಕೂಡಾ ಅವರೊಂದಿಗಿರುತ್ತಾನೆ. ಲಿಫ್ಟ್ ನಿಂದ ಹೊರ ಬಂದ ತಾಯಿ ಎದುರಿಗಿದ್ದ ಡೋರ್ ತೆರೆಯಲು ಕಾಯುತ್ತಾಳೆ. ಆದರೆ ಇತ್ತ ತುಂಟ ಮಗು ತನ್ನ ತುಂಟಾಟ ಆರಂಭಿಸಿದ್ದು, ಮೆಟ್ಟಿಲುಗಳ ರೇಲಿಂಗ್ ಬಳಿ ತೆರಳುತ್ತದೆ. 

Tap to resize

Latest Videos

ರೇಲಿಂಗ್ ಬಳಿ ತಲುಪಿದ ಮಗು ಆಯತಪ್ಪಿ ಬೀಳುತ್ತದೆ. ಅದೃಷ್ವಶಾತ್ ಅಷ್ಟರಲ್ಲೇ ಅತ್ತ ಗಮನ ಹರಿಸುತ್ತಾಳೆ. ಮಗು ಬೀಳುತ್ತಿರುವುದನ್ನು ಕಂಡು ಹೌಹಾರಿದ ಆಕೆ ಆ ಕೂಡಲೇ ಬೀಳುತ್ತಿದ್ದ ಮಗನ ಕೈ ಹಿಡಿಯುವಲ್ಲಿ ಯಶಸ್ವಿಯಾಗುತ್ತಾಳೆ. ಷ್ಟರಲ್ಲೇ ಡೆಲಿವರಿ ಬಾಯ್ ಕೂಡಾ ಆಕೆಯ ಸಹಾಯಕ್ಕೆ ಧಾವಿಸಿ ಮಗುವನ್ನು ಕಾಪಾಡಲು ಸಫಲರಾಗುತ್ತಾರೆ.

ಕೊಂಚ ಯಾಮಾರಿದ್ದರೂ ಮಗು ಬದುಕುತ್ತಿರಲಿಲ್ಲ ಎಂಬುವುದು ಸಿಬ್ಬಂದಿಗಳ ಮಾತಾಗಿದೆ. ಅದೇನೆ ಇದ್ದರೂ ಮಗು ಮಾತ್ರ 'ಅಮ್ಮ ನಿನ್ನ ಮಡಿಲಲ್ಲಿ ನಾನು ಯಾವತ್ತೂ ಸೇಫ್' ಎಂಬ ಲುಕ್ ಕೊಟ್ಟಿದೆ.

click me!