ಕೆಲಸ ಅರಸಿ ಬೆಂಗಳೂರಿಗೆ ಬಂದವನು ಏನಾದ?: ತಾಯಿಗಿದೆ ಉಗ್ರರ ಸಂಘಟನೆಗೆ ಮಾರಿರುವ ಅನುಮಾನ

By Internet DeskFirst Published Oct 4, 2016, 10:05 PM IST
Highlights

ಚಿಕ್ಕಮಗಳೂರು(ಅ.05): ಓದಿದ್ದು ಮೆಕ್ಯಾನಿಕಲ್ ಇಂಜಿನಿಯರ್ ಕಂಡು ಹಿಡಿದಿದ್ದು ಗಾಳಿಯಲ್ಲೇ ಓಡುವ ಬೈಕ್. ಕೆಲಸ ಅರಿಸಿ ಬೆಂಗಳೂರಿಗೆ ಹೋದವನ ಸುಳಿವು ಈವರೆಗೂ ಸಿಕ್ಕಿಲ್ಲ. ಅವನು ಎಲ್ಲಿ ಹೋದ ಎನ್ನುವುದು ಇಂದಿಗೂ ನಿಗೂಢ. ಆತನ ತಾಯಿಗೆ ಬರುತ್ತಿರುವ ಫೋನ್‍ಗ'ಳು ಆತ ಉಗ್ರಗಾಮಿ ಸಂಘಟನೆ ಸೇರಿರುವ ಅನುಮಾನ ಮೂಡಿಸುತ್ತಿವೆ.

ಚಿಕ್ಕಮಗಳೂರಿನ ಕೊಟ್ಟಿಗೆಹಾರ ನಿವಾಸಿ ಉಮ್ಮರ್ ಫಾರುಕ್, ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಕಂಡು ಹಿಡಿದಿದ್ದು ಗಾಳಿಯಲ್ಲಿ ಓಡುವ ಬೈಕ್. ವಿದ್ಯಾಭ್ಯಾಸ ಮುಗಿಸಿ 2012ರಲ್ಲಿ ಕೆಲಸ ಅರಸಿ ಬೆಂಗಳೂರಿಗೆ ಹೋಗಿದ್ದ. ಆರಂಭದಲ್ಲಿ ಮಸೀದಿಯಲ್ಲಿದ್ದೇನೆ ಎಂದು ತಾಯಿಗೆ ಫೋನ್ ಮಾಡಿದ್ದ ಫಾರುಕ್ 2012 ಮೇ 31ರಂದು ನಾನು ಧರ್ಮ ಪ್ರಚಾರಕ್ಕೆ ಮುಂಬೈಗೆ ಬಂದಿದ್ದೇನೆ ಅಂದಿದ್ದೇ ಲಾಸ್ಟ್ ಕಾಲ್.  ಅಂದಿನಿಂದ ಇಂದಿನವರೆಗೆ ಆತನ ಸುಳಿವೇ ಸಿಕ್ಕಿಲ್ಲ. ಮೌಲ್ವಿಗಳು ಮಾತ್ರ ನಿಮ್ಮ ಮಗ ಮಿಸ್ ಆದ ಎನ್ನುತ್ತಾರೆ.

Latest Videos

ಇನ್ನು ನನ್ನ ಮಗನನ್ನು ಹುಡುಕಿಕೊಡಿ ಎಂದು ಡಿಐಜಿಯವರಿಗೂ ಈತನ ತಾಯಿ ಮನವಿ ಮಾಡಿದ್ದಾರಂತೆ. ಆತ ನಾಪತ್ತೆಯಾದ ನಂತರದ ಬೆಳವಣಿಗೆಗಳು ಆತ ಉಗ್ರಗಾಮಿ ಸಂಘಟನೆ ಸೇರಿರುವ ಅನುಮಾನಕ್ಕೆ ದಾರಿಯಾಗಿವೆ. ಫಾರುಕ್ ತಾಯಿಗೆ ಬರುವ ಅನಾಮಧೇಯ ಕರೆಗಳು ಅನುಮಾನಕ್ಕೆ  ಇನ್ನಷ್ಟು ಪುಷ್ಠಿ ನೀಡಿವೆ. ಧರ್ಮ ಪ್ರಚಾರಕ್ಕೆಂದು ಕರೆದುಕೊಂಡು ಹೋಗಿ ಫಾರುಕ್‌'ನನ್ನು ಉಗ್ರಗಾಮಿಗಳಿಗೆ ಮಾರಲಾಗಿದೆ ಎಂದು ಫಾರೂಕ್ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿಸದ್ದಾರೆ.

ಒನ್ನೂ ಅವನ ಒಂದೊಂದು ವಸ್ತುಗಳು ಒಂದೊಂದು ರಾಜ್ಯದಲ್ಲಿ ಸಿಕ್ಕಿವೆಯಂತೆ. ಆದರೆ, ಅವನು ಎಲ್ಲಿ ಹೋದ ಎನ್ನುವುದು ಇಂದಿಗೂ ನಿಗೂಢ. ಕೂಡಲೇ ಪೊಲೀಸರು ಫಾರುಕ್ ಜೊತೆ ತೆರಳಿದ್ದ 20 ಮಂದಿಯನ್ನು ವಿಚಾರಿಸಿದರೆ ಆತನ ಬಗ್ಗೆ ಸುಳಿವು ಸಿಗುವ ಸಾಧ್ಯತೆಗಳಿವೆ?

click me!