ಕೆಲಸ ಅರಸಿ ಬೆಂಗಳೂರಿಗೆ ಬಂದವನು ಏನಾದ?: ತಾಯಿಗಿದೆ ಉಗ್ರರ ಸಂಘಟನೆಗೆ ಮಾರಿರುವ ಅನುಮಾನ

Published : Oct 04, 2016, 09:23 PM ISTUpdated : Apr 11, 2018, 12:42 PM IST
ಕೆಲಸ ಅರಸಿ ಬೆಂಗಳೂರಿಗೆ ಬಂದವನು ಏನಾದ?: ತಾಯಿಗಿದೆ ಉಗ್ರರ ಸಂಘಟನೆಗೆ ಮಾರಿರುವ ಅನುಮಾನ

ಸಾರಾಂಶ

ಚಿಕ್ಕಮಗಳೂರು(ಅ.05): ಓದಿದ್ದು ಮೆಕಾನಿಕಲ್ ಇಂಜಿನಿಯರ್ ಕಂಡು ಹಿಡಿದಿದ್ದು ಗಾಳಿಯಲ್ಲೇ ಓಡುವ ಬೈಕ್. ಕೆಲಸ ಹರಿಸಿ ಬೆಂಗಳೂರಿಗೆ ಹೋದವನು ಇದುವರೆಗೆಗೂ ಆತನ ಸುಳಿವೇ ಸಿಕ್ಕಿಲ್ಲ. ಅವನು ಎಲ್ಲಿ ಹೋದ ಎನ್ನುವುದು ಇಂದಿಗೂ ನಿಗೂಢ. ಆತನ ತಾಯಿಗೆ ಬರುತ್ತಿರುವ ಫೋನ್‍ಗಳು ಆತ ಉಗ್ರಗಾಮಿ ಸಂಘಟನೆ ಸೇರಿರೋ ಅನುಮಾನ ಮೂಡಿಸುತ್ತಿವೆ.

ಚಿಕ್ಕಮಗಳೂರಿನ ಕೊಟ್ಟಿಗೆಹಾರ ನಿವಾಸಿ ಉಮ್ಮರ್ ಫಾರುಕ್, ಓದಿದ್ದು ಮೆಕಾನಿಕಲ್ ಇಂಜಿನಿಯರ್. ಕಂಡು ಹಿಡಿದಿದ್ದು ಗಾಳಿಯಲ್ಲಿ ಓಡೋ ಬೈಕ್. ವಿದ್ಯಾಭ್ಯಾಸ ಮುಗಿಸಿ 2012ರಲ್ಲಿ ಕೆಲಸ ಹರಸಿ ಬೆಂಗಳೂರಿಗೆ ಹೋಗಿದ್ದ. ಆರಂಭದಲ್ಲಿ ಮಸೀದಿಯಲ್ಲಿದ್ದೇನೆ ಎಂದು ತಾಯಿಗೆ ಫೋನ್ ಮಾಡಿದ್ದ ಫಾರುಕ್ 2012 ಮೇ 31ರಂದು ನಾನು ಧರ್ಮ ಪ್ರಚಾರಕ್ಕೆ ಮುಂಬೈಗೆ ಬಂದಿದ್ದೇನೆ ಅಂದಿದ್ದೇ ಲಾಸ್ಟ್ ಕಾಲ್.  ಅಂದಿನಿಂದ ಇಂದಿನವರೆಗೆ ಆತನ ಸುಳಿವೇ ಸಿಕ್ಕಿಲ್ಲ. ನಿಮ್ಮ ಮಗ ಮಿಸ್ ಆದ ಎನ್ನುತ್ತಾರೆ ಮೌಲ್ವಿಗಳು.

ಇನ್ನು ನನ್ನ ಮಗನನ್ನು ಹುಡುಕಿಕೊಡಿ ಎಂದು ಡಿಐಜಿಯವ್ರಿಗೂ ಈತನ ತಾಯಿ ಮನವಿ ಮಾಡಿದ್ದಾರಂತೆ. ಆತ ನಾಪತ್ತೆಯಾದ ನಂತರದ ಬೆಳವಣಿಗೆಗಳು ಆತ ಉಗ್ರಗಾಮಿ ಸಂಘಟನೆ ಸೇರಿರುವ ಅನುಮಾನಕ್ಕೆ ದಾರಿಯಾಗಿವೆ. ಫಾರುಕ್ ತಾಯಿಗೆ ಬರುವ ಅನಾಮಧೇಯ ಕರೆಗಳು ಅನುಮಾನಕ್ಕೆ  ಇನ್ನಷ್ಟು ಪುಷ್ಠಿ ನೀಡಿವೆ. ಧರ್ಮ ಪ್ರಚಾರಕ್ಕೆಂದು ಕರೆದುಕೊಂಡು ಹೋಗಿ ಫಾರುಕ್‌ನನ್ನು ಉಗ್ರಗಾಮಿಗಳಿಗೆ ಮಾರಲಾಗಿದೆ ಎಂದು ಫಾರೂಕ್ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ತಾರೆ.

ಒನ್ನೂ ಅವನ ಒದೊಂದು ವಸ್ತುಗಳು ಒದೊಂದು ರಾಜ್ಯದಲ್ಲಿ ಸಿಕ್ಕಿವೆಯಂತೆ. ಆದರೆ, ಅವನು ಎಲ್ಲಿ ಹೋದ ಎನ್ನುವುದು ಇಂದಿಗೂ ನಿಗೂಢ. ಕೂಡಲೇ ಪೊಲೀಸರು ಫಾರುಕ್ ಜೊತೆ ತೆರಳಿದ್ದ 20 ಮಂದಿಯನ್ನ ವಿಚಾರಿಸಿದರೆ ಆತನ ಬಗ್ಗೆ ಸುಳಿವು ಸಿಗಬುಹುದೇನೋ..?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು
ಬೆಂಗಳೂರು: 2 ಲಕ್ಷ ಬೆಲೆಯ ಗಿಳಿ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಯುವಕ!