ಎಚ್ಚರ...ಜಾತಿ ಪ್ರಮಾಣ ಪತ್ರ ನಿರಾಕರಿಸಿದ್ರೆ ದಂಡ ಕಟ್ಬೇಕು!

By Web DeskFirst Published Aug 1, 2018, 2:52 PM IST
Highlights

ಕೋಲಾರದಲ್ಲಿ ಸಮುದಾಯವೊಂದಕ್ಕೆ ಜಾತಿ ಪ್ರಮಾಣ ಪತ್ರ ಸಿಗದಿಇರುವ ಸ್ಟೋರಿಯನ್ನು ಬಿಗ್ ಯಲ್ಲಿ ನೀವು ನೋಡಿದ್ದೀರಿ. ಇದೇ ಬಗೆಯಲ್ಲಿ ಜಾತಿ ಪ್ರಮಾಣ ಪತ್ರ ನಿರಾಕರಿಸಿದ್ದ ಅಧಿಕಾರಿಗಳಿಗೆ ನ್ಯಾಯಾಲಯ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.

ಮುಂಬೈ(ಆ.1) ಪರಿಶಿಷ್ಟ ಪಂಗಡದ ಎಂಬಿಎ ವಿದ್ಯಾರ್ಥಿಯೊಬ್ಬರಿಗೆ ಜಾತಿ ಪ್ರಮಾಣ ಪತ್ರ ನಿರಾಕರಿಸಿದ ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್ ಒಂದು ಲಕ್ಷ ರು. ದಂಡ ವಿಧಿಸಿ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಎಸ್.ಸಿ.ಧರ್ಮಾಧಿಕಾರಿ ಮತ್ತು ಭಾರತೀ ಢಾಂಗ್ರೆ ಈ ಆದೇಶ ನೀಡಿದ್ದಾರೆ. ಗೌರವ್ ಪವಾರ್ ಎಂಬ ವಿದ್ಯಾರ್ಥಿ ಸಲ್ಲಿಕೆ ಮಾಡಿದ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು. ಗೌರವ್ ಪರ ವಕೀಲ ರಾಮಚಂದ್ರ ಮೆಂಡಾಡ್ ಕರ್ ವಾದ ಮಂಡಸಿದಿದರು. 

ಈ ಜಿಲ್ಲೆಯ ಜನರಿಗೆ ಜಾತಿ ಪ್ರಮಾಣ ಪತ್ರ ಸಿಗ್ತಾ ಇಲ್ಲ!

ಗೌರವ್ ಅಪ್ಪ, ಚಿಕ್ಕಪ್ಪ ಮತ್ತು ಸಹೋದರಿಯರು ಜಾತಿ ಪ್ರಮಾಣ ಪತ್ರ ಹೊಂದಿದ್ದಾರೆ. ಆದರೆ ಗೌರವ್ ಗೆ ಆಡಳಿತ ಪ್ರಮಾನ ಪತ್ರ ನೀಡಲು ನಿರಾಕರಣೆ ಮಾಡುತ್ತಿದೆ. ಪರಿಶಿಷ್ಟ ಪಂಗಡದ ವ್ಯಕ್ತಿ ಎಂದು ಸಾಬೀತು ಮಾಡಲು ಆಕತನ ಬಳಿ ಸಾಕಷ್ಟು ದಾಖಲೆಗಳಿವೆ ಎಂದು ವಾದ ಮಂಡಿಸಿದರು.

ಎಲ್ಲ ವಾದ ಮತ್ತು ವಿಚಾರಗಳನ್ನು ಆಲಿಸಿದ ನ್ಯಾಯಪೀಠ ಆಗಸ್ಟ್ 3 ರೊಳಗೆ ಜಾತಿ ಪ್ರಮಾಣ ಪತ್ರ ಮನೀಡಬೇಕು. ಜತೆಗೆ ಒಂದು ಲಕ್ಷ ರೂಪಾಯಿ ದಂಡದ ರೂಪದಲ್ಲಿ ನೀಡಬೇಕು ಎಂದು ಆದೇಶ ನೀಡಿತು.

click me!