ಮೊಹರಮ್ ಆಚರಣೆಯಲ್ಲಿ ಮಕ್ಕಳು: ಬಾಂಬೆ ಹೈಕೋರ್ಟ್ ಕಳವಳ

By Suvarna Web DeskFirst Published Jul 4, 2017, 8:28 PM IST
Highlights

ಮೊಹರಮ್ ಆಚರಣೆಯಲ್ಲಿ ಮಕ್ಕಳು ಪಾಲ್ಗೊಳ್ಳುವುದುರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಆಯೋಜಕರೊಂದಿಗೆ ಮಾತುಕತೆ ನಡೆಸಿ ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಿಗೆ ಸೂಚಿಸಿದೆ.

ಮುಂಬೈ(ಜು. 04): ಮೊಹರಮ್ ಆಚರಣೆಯಲ್ಲಿ ಮಕ್ಕಳು ಪಾಲ್ಗೊಳ್ಳುವುದುರ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಆಯೋಜಕರೊಂದಿಗೆ ಮಾತುಕತೆ ನಡೆಸಿ ಆ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರಿಗೆ ಸೂಚಿಸಿದೆ.

2014ರಲ್ಲಿ ಮುಂಬೈ ಪೊಲಿಸರು  ಹೊರಡಿಸಿದ್ದ ಸುತ್ತೋಲೆ ಕುರಿತು ಸಾರ್ವಜನಿಜಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ  ನಡೆಸಿದ ನ್ಯಾ. ಆರ್. ಎಂ. ಸಾವಂತ್  ಮತ್ತು ನ್ಯಾ. ಸಾಧಾನ ಜಾಧವ್ ‘ರನ್ನೊಳಗೊಣಂಡ ಪೀಠವು, ಮೊಹರಮ್ ಮೆರವಣಿಗೆಗಳಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ತಡೆಯಲು ಆಯೋಜಕರೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದೆ.

ಮಕ್ಕಳ ಭಾಗವಹಿಸುವಿಕೆಯನ್ನು ತಡೆಯುವಂತೆ,  ಹರಿತ ಆಯುಧಗಳ ಬಳಕೆಯಾಗದಂತೆ,  ಹಾಗೂ ಮೆರವಣಿಗೆಯನ್ನು ವಿಡಿಯೋ ಶೂಟ್ ಮಾಡುವಂತೆ ಸೂಚಿಸಿ ಪೊಲೀಸರು ಸುತ್ತೋಲೆ ಹೊರಡಿಸಿದ್ದರು.

ಮಕ್ಕಳು ಪಾಳ್ಗೊಳ್ಳದಿರುವುದನ್ನು ಸಮುದಾಯದ ಮುಖಂಡರು ಖಚಿತ ಪಡಿಸಿದರೆ, ಪೊಲೀಸರು ನಿಗಾ ವಹಿಸುವ ಅಗತ್ಯವಿರುವುದಿಲ್ಲ. ಆದುದರಿಂದ ಮುಖಂಡರ ಜತೆ ಚರ್ಚಿಸಿ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರ್ಟ್ ಹೆಚ್ಚುವರಿ ಪೊಲೀಸ್ ಆಯುಕ್ತರಗೆ ಸೂಚಿಸಿದೆ.

ಜು. 24ರಂದು ಈ ಕುರಿತು ವರದಿ ಸಲ್ಲಿಸುವಂತೆ ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಸೆಪ್ಟಂಬರ್ ತಿಂಗಳಿನಲ್ಲಿ ಮೊಹರಮ್ ಆಚರಣೆ ನಡೆಯಲಿದೆ.

ಪ್ರವಾದಿ ಮುಹಮ್ಮದ್’ರ ಮೊಮ್ಮಗ ಹುಸೇನ್ ಅವರು ಕರ್ಬಲಾ ಯುದ್ಧದಲ್ಲಿ ಹುತಾತ್ಮರಾದ ಘಟನೆಯ ಶೋಕಾಚರಣೆಯನ್ನು ಮೊಹರಮ್’ನಲ್ಲಿ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ಅವರ ಅನುಯಾಯಿಗಳು ಹರಿತವಾದ ಆಯುಧಗಳಿಂದ ತಮ್ಮ ಮೈಮೇಲೆ ಹೊಡೆದುಕೊಂಡು ತಮ್ಮ ನಿಷ್ಠೆಯನ್ನು ತೋರ್ಪಡಿಸುತ್ತಾರೆ.

click me!