ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಹರಡಿ, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮಂಗಳೂರು(ಸೆ.20): ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಇಡಲಾಗಿದೆ ಎಂಬ ಸುದ್ದಿ ಹರಡಿ, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಪ್ರಯಾಣಿಕರ ಸ್ಕ್ರೀನಿಂಗ್ ತಪಾಸಣೆ ವೇಳೆ ಬಾಂಬ್ ಸುದ್ದಿಯಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದರು. ಬಳಿಕ ಸೂಕ್ತ ತಪಾಸಣೆಯ ನಂತರ ಏರ್ಪೋರ್ಟ್ನಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಅಂತ ವಿಮಾನ ನಿಲ್ದಾಣದ ತಪಾಸಣಾ ಅಧಿಕಾರಿಗಳು ಸ್ಪಷ್ಟನೆ ಕೊಟ್ಟರು. ಇನ್ನು ಅಧಿಕಾರಿಗಳು ಪ್ರಯಾಣಿಕರ ಬ್ಯಾಗ್, ಸ್ಕ್ರೀನಿಂಗ್ ತಪಾಸಣೆ ವೇಳೆ ಸ್ಫೋಟಕ ವಸ್ತುಗಳಿಗೆ ಬರುವ ಮಾದರಿಯಲ್ಲಿ ಭೀಪ್ ಸೌಂಡ್ ಕೇಳಿ ಬಂದಿದೆ.
ಹೆಚ್ಚಿನ ತಪಾಸಣೆ ಮಾಡಿದಾಗ ಬ್ಯಾಗ್ನಲ್ಲಿ ಮೊಬೈಲ್ ಚಾರ್ಜ್ ಮಾಡಲು ಬಳಸುವ ಪವರ್ ಬ್ಯಾಂಕ್ ಪತ್ತೆಯಾಗಿದೆ. ತಪಾಸಣಾ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಪವರ್ ಬ್ಯಾಂಕ್ ವಶಪಡಿಸಿಕೊಂಡಿದ್ದಾರೆ.