ಪ್ರೀತಿಗಾಗಿ ಹೈಜಾಕ್ ನಾಟಕ; ನೋ ಫ್ಲೈ ಪಟ್ಟಿಗೆ ಸೇರಿದ ಉದ್ಯಮಿ

First Published May 21, 2018, 9:37 AM IST
Highlights

ವಿಮಾನದಲ್ಲಿ ಬಾಂಬ್ ಇದೆ ಎಂದು ನಾಟಕವಾಡಿ ಭೀತಿ ಸೃಷ್ಟಿಸಿದ್ದ ಮುಂಬೈ ಮೂಲದ ಉದ್ಯಮಿಯನ್ನು ರಾಷ್ಟ್ರೀಯ ನೋ ಫ್ಲೈ ಪಟ್ಟಿಗೆ ಸೇರಿಸಲಾಗಿದೆ. ದೇಶದಲ್ಲಿ ನೋ ಫ್ಲೈ ಪಟ್ಟಿ (2 ವರ್ಷದವರೆಗೆ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ನಿಷೇಧ ವಿಧಿಸುವ ಪಟ್ಟಿ) ಜಾರಿಗೆ ಬಂದ 8 ತಿಂಗಳ ನಂತರ ಈ ಪಟ್ಟಿಗೆ ಸೇರ್ಪಡೆಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ.

ನವದೆಹಲಿ (ಮೇ. 21): ವಿಮಾನದಲ್ಲಿ ಬಾಂಬ್ ಇದೆ ಎಂದು ನಾಟಕವಾಡಿ ಭೀತಿ ಸೃಷ್ಟಿಸಿದ್ದ ಮುಂಬೈ ಮೂಲದ ಉದ್ಯಮಿಯನ್ನು ರಾಷ್ಟ್ರೀಯ ನೋ ಫ್ಲೈ ಪಟ್ಟಿಗೆ ಸೇರಿಸಲಾಗಿದೆ. ದೇಶದಲ್ಲಿ ನೋ ಫ್ಲೈ ಪಟ್ಟಿ (2 ವರ್ಷದವರೆಗೆ ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ನಿಷೇಧ ವಿಧಿಸುವ ಪಟ್ಟಿ) ಜಾರಿಗೆ ಬಂದ ೮ ತಿಂಗಳ ನಂತರ ಈ ಪಟ್ಟಿಗೆ ಸೇರ್ಪಡೆಯಾದ ಮೊದಲ ವ್ಯಕ್ತಿ ಇವರಾಗಿದ್ದಾರೆ.

ಮುಂಬೈನ ಉದ್ಯಮಿ ಬಿರ್ಜು ಕಿಶೋರ್ ಸಲ್ಲಾ (37) ಅವರ ಪ್ರೇಯಸಿ ಜೆಟ್ ಏರ್‌ವೇಸ್‌ನ ದೆಹಲಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಳು. ತಾನು ಬಾಂಬ್ ಭೀತಿ ಸೃಷ್ಟಿಸಿ ಜೆಟ್ ಏರ್  ವೇಸ್‌ನ ದೆಹಲಿ ಕಚೇರಿ ಮುಚ್ಚಿಸಿದರೆ ಆಕೆ ಮುಂಬೈಗೆ ಬಂದು ನೆಲೆಸುತ್ತಾಳೆಂದು ಲೆಕ್ಕ ಹಾಕಿದ್ದರು. ಅದರಂತೆ ಮುಂಬೈ-ದೆಹಲಿ ವಿಮಾನದಲ್ಲಿ ತಾನು ಪ್ರಯಾಣಿಸುವಾಗ ಅದರ ಶೌಚಾಲಯದಲ್ಲಿ ‘ಈ ವಿಮಾನದಲ್ಲಿ ಬಾಂಬ್ ಇದೆ. ಇದನ್ನು ಹೈಜಾಕ್ ಮಾಡಲಾಗಿದೆ. ಸೀದಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯಿರಿ’ ಎಂದು ಚೀಟಿ ಬರೆದಿರಿಸಿದ್ದರು. ಕೂಡಲೇ ವಿಮಾನವನ್ನು ಅಹ್ಮದಾಬಾದ್ ನಲ್ಲಿ ಲ್ಯಾಂಡ್ ಮಾಡಲಾಗಿತ್ತು. 

click me!