
ಜಮ್ಮು (ಮೇ. 21): ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಭಾರತದ ಯೋಧರು ನೀಡುತ್ತಿರುವ ದಿಟ್ಟ ಪ್ರತ್ಯುತ್ತರದಿಂದ ಪಾಕ್ ಕಂಗಾಲಾಗಿದೆ. ಅಪರೂಪದ ವಿದ್ಯಮಾನವೊಂದರಲ್ಲಿ ಪಾಕಿಸ್ತಾನದ ರೇಂಜರ್‌ಗಳು ಭಾರತದ ಗಡಿ ಭದ್ರತಾ ಪಡೆಯ ಜಮ್ಮು ಕಚೇರಿಗೆ ಕರೆ ಮಾಡಿ ‘ದಯವಿಟ್ಟು ದಾಳಿ ನಿಲ್ಲಿಸಿ’ ಎಂದು ಭಾನುವಾರ ಬೇಡಿಕೊಂಡಿದ್ದಾರೆ!
ಕೆಲ ದಿನಗಳಿಂದ ಪಾಕಿಸ್ತಾನದ ಯೋಧರು ಗಡಿಯಲ್ಲಿ ಅಕಾರಣ ಗುಂಡಿನ ದಾಳಿ ಹಾಗೂ ಬಾಂಬ್ ದಾಳಿ ನಡೆಸುತ್ತಿದ್ದರು. ಅದರಲ್ಲಿ ಇಬ್ಬರು ಭಾರತೀಯ ಯೋಧರು ಹಾಗೂ ಜಮ್ಮುವಿನ 4 ನಾಗರಿಕರೂ ಮೃತಪಟ್ಟಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಶನಿವಾರ ಹಾಗೂ ಭಾನುವಾರ ಗಡಿ ಭದ್ರತಾ ಪಡೆ ಯೋಧರು ಗಡಿಯಲ್ಲಿ ಭಾರಿ ಪ್ರಮಾಣದ ಪ್ರತಿದಾಳಿ ನಡೆಸಿದ್ದರು. ಇದರಲ್ಲಿ ಪಾಕ್‌ನ ಇಬ್ಬರು ಯೋಧರು ಸಾವನ್ನಪ್ಪಿದ್ದರು.
ಈ ವೇಳೆ ಬಿಎಸ್‌ಎಫ್‌ಗೆ ಕರೆ ಮಾಡಿ ದಾಳಿ ನಿಲ್ಲಿಸುವಂತೆ ಪಾಕ್ ಅಂಗಲಾಚಿತ್ತು. ಆದರೆ, ಇದಾಗಿ ಕೆಲವೇ ಗಂಟೆಗಳಲ್ಲಿ ಪಾಕ್ ಮತ್ತೆ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ಮಾಡಿದೆ. ಪಾಕ್‌ಗೆ ಭಾರತವೂ ತಕ್ಕ ಪ್ರತ್ಯುತ್ತರ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.