ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ಹಾಗೂ ಪುತ್ರಿ ಆಲಿಯಾ ಭಟ್'ಗೆ ಜೀವ ಬೆದರಿಕೆ

By Suvarna Web DeskFirst Published Mar 2, 2017, 5:43 AM IST
Highlights

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮಹೇಶ್ ಭಟ್ ಹಾಗೂ ಅವರ ಪುತ್ರಿ ನಟಿ ಅಲಿಯಾ ಭಟ್‌ಗೆ ಜೀವ ಬೆದರಿಕೆ ಹಾಕಲಾಗಿದೆ.

ಮುಂಬೈ(ಮಾ.02):ಬಾಲಿವುಡ್‌ನ ಖ್ಯಾತ ನಿರ್ದೇಶಕ ಮಹೇಶ್ ಭಟ್ ಹಾಗೂ ಅವರ ಪುತ್ರಿ ನಟಿ ಅಲಿಯಾ ಭಟ್‌ಗೆ ಜೀವ ಬೆದರಿಕೆ ಹಾಕಲಾಗಿದೆ.

ಮುಂಬೈನ ಅನಾಮಿಕ ಗ್ಯಾಂಗ್‌ವೊಂದರಿಂದ ಜೀವ ಬೆದರಿಕೆ ಕರೆ ಬಂದಿದ್ದು , ದುಷ್ಕರ್ಮಿಗಳು ಮಹೇಶ್ ಭಟ್‌ರಿಗೆ 50 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಹೇಶ್ ಭಟ್ ಅವರಿಗೆ ಕರೆ ಮಾಡಿದ್ದ ಅನಾಮಿಕ ಗ್ಯಾಂಗ್ ಲೀಡರ್‌ ಅಲಿಯಾ ಭಟ್ ಮತ್ತು ಮಹೇಶ್ ಭಟ್ ಇಬ್ಬರಿಗೂ ಕೊಲೆ ಬೆದರಿಕೆ ಹಾಕಿದ್ದಾನೆ.

ಇನ್ನು ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಎಫ್‌ಐಆರ್ ದಾಖಲಿಸಿದ್ದಾರೆ.

click me!