ಮಕ್ಕಳ ಸ್ಮಗ್ಲಿಂಗ್: ಬಿಜೆಪಿ ನಾಯಕಿ ಸೆರೆ

By Suvarna Web DeskFirst Published Mar 2, 2017, 5:32 AM IST
Highlights

ಕನಿಷ್ಠ 17 ಮಕ್ಕಳನ್ನು ಅಕ್ರ ಮವಾಗಿ ವಿದೇಶಿ ದಂಪತಿಗೆ ಮಾರಾಟ ಮಾಡಿದ ಆರೋಪ ಸಂಬಂಧ ಪಶ್ಚಿಮ ಬಂಗಾಳದ ಬಿಜೆಪಿ ನಾಯಕಿಯೊಬ್ಬರನ್ನು ಬಂಗಾಳ ಸಿಐಡಿ ಬಂಧಿಸಿದೆ. ಪಕ್ಷದ ನಾಯಕಿ ಜೂಹಿ ಚೌಧರಿ ಬಂಧಿತೆ. ಭಾರತ- ನೇಪಾಳ ಗಡಿಯಲ್ಲಿ ಈಕೆಯನ್ನು ಬಂಧಿಸಿದ ಬಳಿಕ ಇನ್ನೂ ನಾಲ್ವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ.

ಕೋಲ್ಕತಾ(ಮಾ.02): ಕನಿಷ್ಠ 17 ಮಕ್ಕಳನ್ನು ಅಕ್ರ ಮವಾಗಿ ವಿದೇಶಿ ದಂಪತಿಗೆ ಮಾರಾಟ ಮಾಡಿದ ಆರೋಪ ಸಂಬಂಧ ಪಶ್ಚಿಮ ಬಂಗಾಳದ ಬಿಜೆಪಿ ನಾಯಕಿಯೊಬ್ಬರನ್ನು ಬಂಗಾಳ ಸಿಐಡಿ ಬಂಧಿಸಿದೆ. ಪಕ್ಷದ ನಾಯಕಿ ಜೂಹಿ ಚೌಧರಿ ಬಂಧಿತೆ. ಭಾರತ- ನೇಪಾಳ ಗಡಿಯಲ್ಲಿ ಈಕೆಯನ್ನು ಬಂಧಿಸಿದ ಬಳಿಕ ಇನ್ನೂ ನಾಲ್ವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ.

ಚಂದನಾ ಎಂಬಾಕೆ ಬಿಮಲ ಶಿಶು ಗೃಹ ಎಂಬ ಹೆಸರಲ್ಲಿ ಸರ್ಕಾರೇತರ ಸಂಸ್ಥೆಯ ಮೂಲಕ ಶಿಶು ಪಾಲನಾ ಕೇಂದ್ರ ನಡೆಸುತ್ತಿದ್ದಳು. ಇಲ್ಲಿ ದಾಖಲಾಗುತ್ತಿದ್ದ ಮಕ್ಕಳನ್ನು ಆಕೆ ಅಕ್ರಮವಾಗಿ ವಿದೇಶಿ ದಂಪತಿಗೆ ಮಾರಾಟ ಮಾಡುತ್ತಿದ್ದಳು. ಈ ಕೃತ್ಯದಲ್ಲಿ ಆಕೆಗೆ ಜೂಹಿ ಕೂಡಾ ನೆರವಾಗಿ ದ್ದಳು. ಕೆಲ ದಿನಗಳ ಹಿಂದೆ ಚಂದನಾಳನ್ನು ಪೊಲೀಸರು ಬಂಧಿಸಿದ್ದು, ಆಕೆ ನೀಡಿದ ಮಾಹಿತಿ ಮೇರೆಗೆ ಇದೀಗ ಜೂಹಿಯನ್ನು ಬಂಧಿಸಲಾಗಿದೆ. ವಿಚಾ ರಣೆ ವೇಳೆ ಚಂದನಾ, ತನಗೆ ಜೂಹಿ ಅವರು ಬಿಜೆಪಿ ನಾಯಕ ಕೈಲಾಸ್‌ ವಿಜಯ್‌ ವರ್ಗೀಯ ಹಾಗೂ ಮಹಾಭಾರತ ಟೀವಿ ಧಾರಾವಾಹಿಯ ದ್ರೌಪದಿ ಪಾತ್ರಧಾರಿ ರೂಪಾ ಗಂಗೂಲಿ ಅವರನ್ನು ಪರಿಚಯ ಮಾಡಿಸಿಕೊಟ್ಟಿದ್ದರು ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ನನ್ನ ಸಂಸ್ಥೆಯ ನೋಂದಣಿ ನವೀಕರಣ ಮತ್ತು ಬೇರೆ ಶಿಶುಪಾಲನಾ ಕೇಂದ್ರಗಳಿಗೆ ವರ್ಗವಾಗಿದ್ದ ಮಕ್ಕಳನ್ನು ಮರಳಿ ನನ್ನ ಶಿಶುಪಾಲನಾ ಕೇಂದ್ರಗಳಿಗೆ ವರ್ಗ ಮಾಡಿಸಲು ನೆರವಾಗುವಂತೆ ನಾನು ರೂಪಾ ಮತ್ತು ವಿಜಯ್‌ ಅವರ ನೆರವನ್ನು ಪಡೆದಿದ್ದೆ ಎಂದು ಚಂದನಾ ಹೇಳಿಕೊಂಡಿದ್ದಾಳೆ.

ಈ ನಡುವೆ, ಮಕ್ಕಳ ಕಳ್ಳ ಸಾಗಣೆ ಜಾಲದಲ್ಲಿ ಪಕ್ಷದ ಯಾವ ಮುಖಂಡರೂ ಭಾಗಿಯಾಗಿಲ್ಲ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಒಂದು ಘಟಕದಂತೆ ಸಿಐಡಿ ಕಾರ್ಯನಿರ್ವಹಿಸು ತ್ತಿದೆ ಎಂದು ಬಿಜೆಪಿ ದೂರಿದೆ. ಜೂಹಿ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದಲೂ ವಜಾಗೊಳಿಸಿದೆ. ಈ ಮಧ್ಯೆ, ಚಂದನಾ ಅವರನ್ನು ತಾವು ಭೇಟಿ ಯಾಗಿದ್ದನ್ನು ವಿಜಯವರ್ಗೀಯ ಹಾಗೂ ರೂಪಾ ಗಂಗೂಲಿ ನಿರಾಕರಿಸಿದ್ದಾರೆ.

click me!