
ಮುಂಬೈ(ಮಾ.02): ‘ನನ್ನ ಸಾವಿನ ನಂತರ ನನಗೆ ಸೇರಿದ ಆಸ್ತಿಯನ್ನು ಪುತ್ರ ಅಭಿಷೇಕ್ ಮತ್ತು ಪುತ್ರಿ ಶ್ವೇತಾ ನಂದಾಗೆ ಸಮಾನವಾಗಿ ಹಂಚಿಕೆಯಾಗಬೇಕು,’ ಎಂಬ ಕಾರ್ಡ್ ಹಿಡಿದ ಫೋಟೊವನ್ನು ಬಿಗ್'ಬಿ ಅಮಿತಾಭ್ ಟ್ವೀಟ್ ಮಾಡಿದ್ದಾರೆ.
ವಿಶ್ವಾದ್ಯಂತ ಲಿಂಗ ತಾರತಮ್ಯದ ವಿರುದ್ಧ ಮತ್ತು ಗಂಡು-ಹೆಣ್ಣಿನ ನಡುವಿನ ಅಂತರವನ್ನು ಕೊನೆಗೊಳಿಸಿ ಸಮಾನ ಅವಕಾಶ ಅವಕಾಶ ನೀಡಬೇಕು ಎಂಬ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಲಿಂಗ ಸಮಾನತೆ ಬಗ್ಗೆ ಪ್ರತಿಪಾದಿಸಿರುವ ಅಮಿತಾಭ್ ತಮ್ಮ ಆಸ್ತಿಯಲ್ಲಿ ಪುತ್ರಿ ಶ್ವೇತಾ ನಂದಾ ಮತ್ತು ಪುತ್ರ ಅಭಿಷೇಕ್ ಬಚ್ಚನ್ ಅವರಿಗೆ ಸಮಾನವಾಗಿ ಹಂಚುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಾಲಿವುಡ್ ಹಿರಿಯ ನಟ ನಾವೆಲ್ಲರೂ ಸಮಾನರು, ಲಿಂಗ ಅಸಮಾನತೆಯನ್ನು ತೊಡೆದುಹಾಕಬೇಕೆಂದು ಕರೆನೀಡಿದ್ದಾರೆ. ಪಿತೃಪ್ರಧಾನ ಕುಟುಂಬವೇ ಹೆಚ್ಚಾಗಿರುವ ಭಾರತದಲ್ಲಿ ತಂದೆಯ ಸಂಪೂರ್ಣ ಆಸ್ತಿ ಆತನ ಪುತ್ರನಿಗೆ ವರ್ಗಾವಣೆಯಾಗುವ ಹಿನ್ನೆಲೆಯಲ್ಲಿ ಬಿಗ್'ಬಿ ಪೋಸ್ಟ್ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.