ಬಿಜೆಪಿ ಸೇರಿದ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌?

By Web DeskFirst Published Oct 23, 2018, 11:43 AM IST
Highlights

2019ರ ಲೋಕಸಭಾ ಚುನಾವಣೆಗೆ ತಯಾರಿಗಳು ಆರಂಭಗೊಂಡಿದೆ. ಪ್ರಮುಖ ಪಕ್ಷಗಳು ಇದೀಗ ಬಾಲಿವುಡ್ ಸೆಲೆಬ್ರೆಟಿಗಳು, ಕ್ರಿಕೆಟಿಗರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಅನ್ನೋ ಸುದ್ದಿಯೊಂದು ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಇಲ್ಲಿದೆ.

ಮುಂಬೈ(ಅ.23): ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಬಿಜೆಪಿ ಸೇರಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗೆ ಹರಿದಾಡುತ್ತಿರುವ ಫೋಟೋದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ನಟ ಅಕ್ಷಯ್‌ ಕುಮಾರ್‌ ಮತ್ತು ಭೂಮಿ ಪೆಡ್ನಾಕರ್‌ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ನಿಂತಿರುವ ದೃಶ್ಯವಿದೆ. 

ಅದರೊಂದಿಗೆ ‘ಸೂಪರ್‌ಸ್ಟಾರ್‌ ಅಕ್ಷಯ್‌ ಕುಮಾರ್‌ ಅವರೂ ಕೂಡ ಬಿಜೆಪಿಯೊಂದಿಗೆ ಕೈಜೋಡಿದ್ದಾರೆ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಸದ್ಯ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅಲ್ಲದೆ ಇತ್ತೀಚೆಗೆ ಅಕ್ಷಯ ಕುಮಾರ್‌ ಮತ್ತು ನರೇಂದ್ರ ಮೋದಿ ಒಟ್ಟಿಗೆ ಕುಳಿತಿರುವ ಫೋಟೋ ಕೂಡ ವೈರಲ್‌ ಆಗಿತ್ತು. ಅನಂತರದಲ್ಲಿ 2019ರ ಚುನಾವಣೆಯಲ್ಲಿ ನಟ ಅಕ್ಷಯ್‌ ಕುಮಾರ್‌ ಬಿಜೆಪಿಯಿಂದ ದೆಹಲಿ ಲೋಕಸಭಾ ಕ್ಷೇತ್ರದಲಿ ಸ್ಪರ್ಧಿಸಬಹುದು ಎಂದೂ ಕೆಲ ಸುದ್ಧಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಆದರೆ ಇದ್ಯಾವುದಕ್ಕೂ ಅಕ್ಷಯ್‌ ಕುಮಾರ್‌ ಪ್ರತಿಕ್ರಿಯಿಸಿರಲಿಲ್ಲ.

ಇದನ್ನೂ ಓದಿ: ರಫೇಲ್‌ ಡೀಲ್‌: ಮೋದಿ ವಿರುದ್ಧ ದೂರಿಗೆ ಸುಪ್ರೀಂ ಆದೇಶ?

ಸದ್ಯ ಅಕ್ಷಯ್‌ಕುಮಾರ್‌ ಬಿಜೆಪಿ ಸೇರಿದ್ದಾರೆ ಎಂದು ವೈರಲ್‌ ಆಗಿರುವ ಫೋಟೋದ ಅಸಲಿ ಕತೆಯೇ ಬೇರೆ. ಇತ್ತೀಚೆಗೆ ಅಕ್ಷಯ್‌ ಕುಮಾರ್‌ ಅಭಿನಯದ ಸಾಮಾಜಿಕ ಕಳಕಳಿ ಹೊಂದಿದ ಸಾಕಷ್ಟುಸಿನಿಮಾಗಳು ಬಂದಿವೆ. ಏಪ್ರಿಲ್‌ 4, 2017ರಂದು ಲಖನೌನಲ್ಲಿ ಅಕ್ಷಯ್‌ ಕುಮಾರ್‌ ಮತ್ತು ಭೂಮಿ ಪೆಡ್ನೇಕರ್‌ ಅವರ ಅಭಿನಯದ ‘ಟಾಯ್ಲೆಟ್‌; ಏಕ್‌ ಪ್ರೇಮ್‌ ಕಥಾ’ ಎಂಬ ಸಿನಿಮಾವನ್ನು ಬಿಡುಗಡೆ ಮಾಡಿದ್ದರು. 

ಇದನ್ನೂ ಓದಿ:ರಾಹುಲ್ ಬಗ್ಗೆ ತರೂರ್ ಹೊಸ ಬುಕ್- ಡಿಕ್ಷನರಿಯಲ್ಲೂ ಸಿಗಲ್ಲ ಅರ್ಥ?

ಇದನ್ನು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ಶಾಲೆಯೊಂದರಲ್ಲಿ ಆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸ್ವಚ್ಛ ಭಾರತ ಮಿಷನ್‌’ ಯೋಜನೆಗೆ ಅಕ್ಷಯ್‌ ಕುಮಾರ್‌ ಅವರನ್ನು ರಾಯಭಾರಿಯಾಗಿಯೂ ನೇಮಿಸಲಾಗಿತ್ತು. ಸದ್ಯ ಅದೇ ಫೋಟೋವನ್ನು ಬೇರೊಂದು ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ.

click me!