
ಚೆನ್ನೈ: ಸರ್ಕಾರಿ ಕೆಲಸ ಕೇಳಲು ಹೋದ 26 ವರ್ಷದ ತರುಣಿ ಯೊಬ್ಬಳನ್ನು ತಮಿಳುನಾಡಿನ ಅಣ್ಣಾ ಡಿಎಂಕೆ ಸರ್ಕಾರದ ಪ್ರಭಾವಿ ಸಚಿವಡಿ. ಜಯಕುಮಾರ್ ಗರ್ಭಿಣಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗರ್ಭಿಣಿಯ ತಾಯಿ ಹಾಗೂ ಸಚಿವರ ನಡುವೆ ನಡೆದಿದೆ ಎನ್ನಲಾದದೂರವಾಣಿ ಸಂಭಾಷಣೆಯ ಆಡಿಯೋ ಈಗ ಬಹಿರಂಗವಾಗಿದೆ.
ಆಡಿಯೋದಲ್ಲಿ ಸಚಿವರದ್ದು ಎನ್ನಲಾದ ಧ್ವನಿಯು, ‘ನಿಮ್ಮ ಮಗಳ ಗರ್ಭಪಾತ ಮಾಡಿಸಿ’ ಎಂದು ಒತ್ತಾಯಿಸುತ್ತದೆ. ಅಣ್ಣಾ ಡಿಎಂಕೆಬಂಡುಕೋರ ನಾಯಕ ಟಿಟಿವಿ ದಿನಕರನ್ ಹಿಡಿತದಲ್ಲಿರುವ ‘ಜಯಾ ಟೀವಿ’ ಈ ಆಡಿಯೋವನ್ನು ಪ್ರಸಾರ ಮಾಡಿದ್ದು, ಜಯಕುಮಾರ್‌ಗೆ ಸಂಕಷ್ಟ ತಂದೊಡ್ಡಿದೆ. ಯುವತಿ ಕಳೆದ ವರ್ಷ ಸರ್ಕಾರಿ ಕೆಲಸ ಕೇಳಿಕೊಂಡು ಜಯಕುಮಾರ್ ಬಳಿ ಹೋಗಿದ್ದಾಗ, ಸಚಿವರು ಆಕೆಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ್ದರು ಎನ್ನಲಾಗಿದೆ.
ಈ ನಡುವೆ, ಆಡಿಯೋದಲ್ಲಿ, ‘ನಿಮ್ಮ ಮಗಳ ಗರ್ಭಪಾತ ಮಾಡಿಸಿ. ಇದಕ್ಕೆ ಎಲ್ಲ ವ್ಯವಸ್ಥೆ ನಾನು ಮಾಡುವೆ. ಚೆನ್ನೈ ಆಸ್ಪತ್ರೆಯವರ ಜತೆ ನಾನೇ ಮಾತನಾಡುವೆ. ಈ ಬಗ್ಗೆ ಪರ್ಸನಲ್ ಆಗಿ ಮಾತಾಡೋಣ ಬನ್ನಿ’ ಎಂದು ಜಯಕುಮಾರ್ ಅವರದ್ದು ಎನ್ನಲಾದ ಧ್ವನಿಯು ಯುವತಿಯ ತಾಯಿಗೆ ಕೋರುತ್ತದೆ.
ಇದರ ಬೆನ್ನಲ್ಲೇ ಜಯಕುಮಾರ್ ಪ್ರತಿಕ್ರಿಯೆ ನೀಡಿದ್ದು, ‘ಆಡಿಯೋದಲ್ಲಿನ ಧ್ವನಿ ನನ್ನದಲ್ಲ. ನನ್ನ ಹೆಸರು ಕೆಡಿಸಲು ರೂಪಿಸದ ಸಂಚು ಇದು. ಇದರ ವಿರುದ್ಧ ಪ್ರಕರಣ ದಾಖಲಿಸುವೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.