ಆನ್‌ಲೈನ್ ರಮ್ಮಿ, ಪೋಕರ್ ಬ್ಯಾನ್; ಸರ್ಕಾರದ ದಿಟ್ಟ ನಿರ್ಧಾರ

By Suvarna NewsFirst Published Sep 4, 2020, 2:35 PM IST
Highlights

ಆನ್ ಲೈನ್ ರಮ್ಮಿ ಮತ್ತು ಪೋಕರ್ ನಿಷೇಧ/ ಆಂಧ್ರ ಪ್ರದೇಶ ಸರ್ಕಾರದ ದಿಟ್ಟ ತೀರ್ಮಾನ/ ಆನ್ ಲೈನ್ ಜೂಜಾಟ  ಬ್ಯಾನ್ ಮಾಡಿದ ಜಗನ್ ಮೋಹನ್ ರೆಡ್ಡಿ ಸರ್ಕಾರ/ ಕರ್ನಾಟಕದಲ್ಲಿ ಯಾವಾಗ?

ಹೈದರಾಬಾದ್(ಸೆ. 04)  ಆನ್ ಲೈನ್  ಜೂಜಾಟ ನಿಷೇಧ ಮಾಡಿ ಎಂಬ ಅಭಿಯಾನ ಕರ್ನಾಟಕದಲ್ಲಿ ಆರಂಭವಾಗಿದೆ. ಪಕ್ಕದ  ಆಂಧ್ರ ಪ್ರದೇಶ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದ್ದು  ಆನ್​ಲೈನ್​ ರಮ್ಮಿ ಮತ್ತು ಪೋಕರ್ ಗೇಮ್​ ಅನ್ನು ನಿಷೇಧ ಮಾಡಿದೆ. 

ಚೀನಾದ ಮೇಲೆ ಡಿಜಿಟಲ್ ಸಮರ ಸಾರಿರುವ ಕೇಂದ್ರ ಸರ್ಕಾರ ಪಬ್ ಜಿ ಸೇರಿ  118 ಆ್ಯಪ್​​ಗಳನ್ನು ಬ್ಯಾನ್ ಮಾಡಿದ ನಂತರ  ಆಂಧ್ರಪ್ರದೇಶ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿದೆ.

ಕೊನೆಗೂ ಪಬ್ ಜಿಗೆ ಮುಕ್ತಿ ಕಾಣಿಸಿದ ಕೇಂದ್ರ ಸರ್ಕಾರ

ಯುವಕರು ಆನ್ ಲೈನ್ ಜೂಜಾಟಕ್ಕೆ ದಾಸರಾಗುತ್ತಿರುವುದನ್ನು ತಡೆಯಲು ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪೆರ್ನಿ ವೆಂಕಟರಮಣಯ್ಯ ಮಾಹಿತಿ ನೀಡಿದ್ದಾರೆ.

ಆನ್ ಲೈನ್ ಆಟ ಸಿದ್ಧಮಾಡುವವರಿಗೆ ಮೊದಲ ಸಾರಿ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ತೀರ್ಮಾನ ಮಾಡಲಾಗಿದೆ.  ಎರಡನೇ ಸಾರಿ ಅಪರಾಧ ಎಸಗಿದರೆ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆನ್ ಲೈನ್ ಜೂಜಾಟ ಆಡುತ್ತಿರುವವರು ಸಿಕ್ಕಿಹಾಕಿಕೊಂಡರೆ ಆರು ತಿಂಗಳು ಜೈಲಿಗೆ ಹೋಗಬೇಕಾಗುತ್ತದೆ. 

click me!