ಬಿದರಿ ಪುತ್ರ ಬೆಂಗಳೂರು ಸಿಬಿಐಗೆ ವರ್ಗಾವಣೆ : ಹೆಚ್'ಡಿಕೆಗೆ ಚಿಂತೆ ಶುರು

By Web DeskFirst Published Sep 5, 2018, 4:36 PM IST
Highlights

ಮಾಜಿ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಪುತ್ರ ವಿಜಯೇಂದ್ರ ಬಿದರಿ ಅವರನ್ನು ಬಿ.ಎಸ್. ಯಡಿಯೂರಪ್ಪ ಉದ್ದೇಶಪೂರ್ವಕವಾಗಿಯೇ ಬೆಂಗಳೂರಿನ ಸಿಬಿಐಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ದಾಳಿ ನಡೆಸುವ ಸಲುವಾಗಿಯೇ ವಿಜಯೇಂದ್ರ ಬಿದರಿ ಬೆಂಗಳೂರಿಗೆ ಪೋಸ್ಟಿಂಗ್ ಆಗಿದ್ದು ಇದು ಸಮ್ಮಿಶ್ರ ಸರ್ಕಾರದ ನಾಯಕರಿಗೆ ತಲೆ ನೋವಾಗಿದೆ.

ಬೆಂಗಳೂರು[ಸೆ.05]: ಮಾಜಿ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರ ಪುತ್ರ ವಿಜಯೇಂದ್ರ ಬಿದರಿ ಬೆಂಗಳೂರಿನ ಸಿಬಿಐಗೆ ವರ್ಗಾವಣೆಯಾಗಿರುವ ಹಿನ್ನಲೆಯಲ್ಲಿ ಸಮ್ಮಿಶ್ರ ಸರ್ಕಾರದ ನಾಯಕರಿಗೆ ಚಿಂತೆ ಶುರುವಾಗಿದೆ.

ಕಾಂಗ್ರೆಸ್ ನಾಯಕರು ಐಟಿ ಬಲೆಗೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ  ಡಿ.ಕೆ.ಶಿವಕುಮಾರ್  ಅವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಐಟಿ, ಇಡಿ, ಸಿಬಿಐ ಕಾರ್ಯಾಚರಣೆಗಳ ಬಗ್ಗೆ ಸಿಎಂ ಮಾಹಿತಿ ಕಲೆ ಹಾಕಿದ್ದು ಈ ಸಂಸ್ಥೆಗಳೆಲ್ಲ ಕಾಂಗ್ರೆಸ್, ಜೆಡಿಎಸ್ ನಾಯಕರನ್ನ ಟಾರ್ಗೆಟ್ ಮಾಡ್ತಿದೆ ಎಂದು ಹೆಚ್ ಡಿಕೆ  ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಿದರಿ ಪುತ್ರ ಬೆಂಗಳೂರಿಗೆ ವರ್ಗಾವಣೆ
ಮಾಜಿ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಪುತ್ರ ವಿಜಯೇಂದ್ರ ಬಿದರಿ ಅವರನ್ನು ಬಿ.ಎಸ್. ಯಡಿಯೂರಪ್ಪ ಉದ್ದೇಶಪೂರ್ವಕವಾಗಿಯೇ ಬೆಂಗಳೂರಿನ ಸಿಬಿಐಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ದಾಳಿ ನಡೆಸುವ ಸಲುವಾಗಿಯೇ ವಿಜಯೇಂದ್ರ ಬಿದರಿ ಬೆಂಗಳೂರಿಗೆ ಪೋಸ್ಟಿಂಗ್ ಆಗಿದ್ದು ಇದು ಸಮ್ಮಿಶ್ರ ಸರ್ಕಾರದ ನಾಯಕರಿಗೆ ತಲೆ ನೋವಾಗಿದೆ.

ಆದಾಯ ತೆರಿಗೆ ಇಲಾಖೆ ಮುಖ್ಯಸ್ಥ ಬಿ.ಆರ್ ಬಾಲಕೃಷ್ಣನ್  ಅವರೊಂದಿಗೆ ಯಡಿಯೂರಪ್ಪ ಅವರ ಪುತ್ರ ಸಭೆ ನಡೆಸಿರುವ ಬಗ್ಗೆ ಸಿಎಂಗೆ ಮಾಹಿತಿ ದೊರೆತಿದೆ. ದೇವೇಗೌಡರ ಕೊನೆಯ ಪುತ್ರ ಎಚ್.ಡಿ ಬಾಲಕೃಷ್ಣ ಅವರ ಕಚೇರಿಯಲ್ಲೂ ಇತ್ತೀಚಿಗಷ್ಟೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.  ಇದರ ಜೊತೆಗೆ ಜಾರಿ ನಿರ್ದೇಶನಾಲಯ ಬಳಸಿಕೊಂಡು ಡಿ.ಕೆ.ಶಿವಕುಮಾರ್ ಮೇಲೆ ಪ್ರಕರಣ ದಾಖಲಿಸಲು ಬಿಜೆಪಿ ಯೋಜನೆ ನಡೆಸುತ್ತಿದೆ.

click me!