ಸುಳ್ ಸುದ್ದಿ: ಸರ್ಕಾರದಿಂದ ಹೊಸ ಲಾಟರಿ ಆರಂಭ : ಗೆದ್ರೆ ಬಂಪರ್ ಬಹುಮಾನ?

Published : Sep 05, 2018, 04:29 PM ISTUpdated : Sep 09, 2018, 08:46 PM IST
ಸುಳ್ ಸುದ್ದಿ: ಸರ್ಕಾರದಿಂದ ಹೊಸ ಲಾಟರಿ ಆರಂಭ : ಗೆದ್ರೆ ಬಂಪರ್ ಬಹುಮಾನ?

ಸಾರಾಂಶ

ಸರ್ಕಾರ ಇದೀಗ ಹೊಸ ಲಾಟರಿ ವ್ಯವಸ್ಥೆಯೊಂದನ್ನು ಜಾರಿ ಮಾಡಿದ್ದು ಇದರಲ್ಲಿ ವಿಜೇತರಾದರೆ ಭರ್ಜರಿ ಬಹುಮಾನವನ್ನು ಪ್ರತಿದಿನ ನೀಡಲಾಗುತ್ತದೆ. 

ನವದೆಹಲಿ :  ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದ್ದು, ಜನರ ಕೈಗೆಟುಕದಂತಾಗಿದೆ. ಹೀಗಾಗಿ ಸರ್ಕಾರ ಲಾಟರಿ ಸ್ಕೀಮ್‌ವೊಂದನ್ನು ಜಾರಿ ಮಾಡಿದೆ. ಈ ಲಾಟರಿಯಲ್ಲಿ ವಿಜೇತರಿಗೆ ಹಣದ ಬದಲು 10 ಲೀಟರ್ ಪೆಟ್ರೋಲ್ ನೀಡಲಾಗುತ್ತದೆ. ಈ ಸ್ಕೀಮ್‌ನಲ್ಲಿ ಪ್ರತ್ಯೇಕವಾಗಿ ಲಾಟರಿ ಖರೀದಿಸಬೇಕಾಗಿಲ್ಲ. 

ಪೆಟ್ರೋಲ್ ಹಾಕಿಸಿಕೊಂಡಿದ್ದಕ್ಕೆ  ರಸೀದಿ ಇದ್ದರೆ ಸಾಕು. ಅದಕ್ಕೊಂದು ನಂಬರ್ ನೀಡಲಾಗುತ್ತದೆ. ಪ್ರತಿ ದಿನ ರಾತ್ರಿ 12 ಗಂಟೆಗೆ 10 ಮಂದಿ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮರುದಿನ ಅದೃಷ್ಟಶಾಲಿಗಳು ಸಮೀಪದ ಪೆಟ್ರೋಲ್ ಬಂಕ್‌ಗೆ ಹೋಗಿ ನಂಬರ್ ತೋರಿಸಿ ಉಚಿತವಾಗಿ ಪೆಟ್ರೋಲ್ ಹಾಕಿಸಿಕೊಳ್ಳಬಹುದು. 

ಈ ಸ್ಕೀಮ್ ಪ್ರಕಟವಾಗುತ್ತಿದ್ದಂತೆ ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India News Live: IPL 2026 - ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
Karnataka News Live: ಮುಳ್ಳಯ್ಯನಗಿರಿಯಲ್ಲಿ ಸೃಷ್ಟಿಯಾಯ್ತು ‘ಮಿನಿ ಹಿಮಾಲಯ’ - ಮುಂಗಾರಿಗೂ ಮುನ್ನವೇ ಮಂಜಿನ ನಗರಿಯಾದ ಕಾಫಿನಾಡು!