
ಕನಕಪುರ [ಜೂ.16] : ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಲುಗಾಡಿಸಲು ಎರಡೂ ಪಕ್ಷಗಳ ಶಾಸಕರಿಗೆ ಬಿಜೆಪಿಯವರು ಚಾಕೋಲೆಟ್ ಹಾಕುತ್ತಿದ್ದಾರೆ. ಅವರ ಆಮಿಷಗಳಿಗೆ ನಮ್ಮ ಶಾಸಕರು ಕಪ್ಪೆಯಂತೆ ಆಡುತ್ತಿದ್ದಾರೆ.
ಆದರೆ ನಾವು ಬಿಜೆಪಿಗೆ ಅಧಿಕಾರ ಸಿಗಲು ಬಿಡಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಹೊರವಲಯದಲ್ಲಿ ಶನಿವಾರ ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರು, ಜೆಡಿಎಸ್-ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದೊಂದು ವರ್ಷದಿಂದ ಚಾಕೊಲೆಟ್ ತೋರಿಸುತ್ತಿದ್ದವರು ಇಂದು ಗಾಂಧಿ ಪ್ರತಿಮೆ ಬಳಿ ಮಲಗಿದ್ದಾರೆ. ಅವರು ಅಲ್ಲೇ ಮಲಗಿರಲಿ. ಅವರಿಗೆ ಅಧಿಕಾರ ಬೇಕು. ಅದಕ್ಕಾಗಿ ಅಲ್ಲಿ ಮಲಗಿದ್ದಾರೆ. ಬಿಜೆಪಿಯವರ ಆಮಿಷಗಳಿಗೆ ನಮ್ಮ ಶಾಸಕರು ಕಪ್ಪೆಯಂತೆ ಆಡುತ್ತಿದ್ದಾರೆ.
ಅವರನ್ನು ಹಿಡಿದಿಡಲು ನಾವು ಶ್ರಮ ಪಡುತ್ತಿದ್ದೇವೆ. ಏನೇ ಆದರೂ ಸರಿ ಬಿಜೆಪಿಗೆ ಅಧಿಕಾರ ಸಿಗುವುದಿಲ್ಲ. ಅದಕ್ಕೆ ನಾವು ಅವಕಾಶ ನೀಡುವುದೂ ಇಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.