ಬಿಜೆಪಿ ನಾಯಕತ್ವ ಬದಲಾವಣೆ? ರಾಜ್ಯಾಧ್ಯಕ್ಷ ಪಟ್ಟ ಯಾರಿಗೆ?

By Web DeskFirst Published May 2, 2019, 1:20 PM IST
Highlights

ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬದಲಾವಣೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಇದೇ ವೇಳೆ ಬಿಜೆಪಿಯಲ್ಲಿಯೂ ನಾಯಕತ್ವ ಬದಲಾವಣೆ ಮಾತುಗಳು ಕೇಳಿ ಬಂದಿವೆ. 

ಶಿವಮೊಗ್ಗ : ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ಬೆಳವಣಿಗೆಗಳಾಗುತ್ತಿವೆ. ರಾಜಕೀಯದಲ್ಲಿ ಸರ್ಕಾರ ಪತನ, ನಾಯಕರ ಬದಲಾವಣೆ ವಿಚಾರದ ಚರ್ಚೆಗಳು ಜೋರಾಗಿದೆ. 

ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಆಯನೂರು ಮಂಜುನಾಥ ತಾವೂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಿದ್ಧ ಎಂದಿದ್ದಾರೆ. 

ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ಅವರ ಬದಲಾವಣೆ ಆಗಬೇಕಿಲ್ಲ. ಇನ್ನೊಂದಿಷ್ಟು ಕಾಲ ಬಿಎಸ್ ವೈ ರಾಜ್ಯಾಧ್ಯಕ್ಷರಾಗಿ ಮುಂದುವರಿಯಬೇಕು ಎಂದರು. 

ಒಂದು ವೇಳೆ ಅವರು ತಮ್ಮ ಸ್ಥಾನ ತ್ಯಜಿಸಿದಲ್ಲಿ , ಪಕ್ಷ ಅವಕಾಶ ಕಲ್ಪಿಸಿದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸಲು ಸಿದ್ಧರಿರುವುದಾಗಿ ಹೇಳಿದರು. 

‘ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಮಧುಗೆ 72 ಸಾವಿರ ಅಂತರದಲ್ಲಿ ಗೆಲುವು’

ಬಿಜೆಪಿ ಪಕ್ಷದ ಸ್ಥಳೀಯ ನಾಯಕತ್ವ ದಿಂದ ಹಿಡಿದು ರಾಷ್ಟ್ರೀಯ ನಾಯಕತ್ವದ ವರೆಗೆ ಜೂನ್ ತಿಂಗಳಲ್ಲಿ ಬದಲಾವಣೆ ನಡೆಯುವುದು ಸಹಜ ಪ್ರಕ್ರಿಯೆ. ಈ ವೇಳೆ ಬದಲಾವಣೆಯಲ್ಲಿ ತಾವೂ ಜವಾಬ್ದಾರಿ ನಿರ್ವಹಿಸಲು ತಯಾರಿರುವುದಾಗಿ ತಿಳಿಸಿದರು.

ಸದ್ಯ ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿರುವ ಬಿಜೆಪಿ ನಾಯಕ ಆಯನೂರು ಮಂಜುನಾಥ್, 2012 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದರಾಗಿದ್ದರು. 

click me!