ಸರ್ಕಾರದ ಮೇಲೆ ದೇವೇಗೌಡ ಸಾಫ್ಟ್ ಕಾರ್ನರ್ ಮಾತಿಗೆ ಗಿಫ್ಟ್ ಕೊಟ್ಟ BSY

By Web DeskFirst Published Nov 6, 2019, 2:46 PM IST
Highlights

ಉಪಚುನಾವಣೆ ಫಲಿತಾಂಶ ಏನೇ ಆಗಲಿ, ಯಡಿಯೂರಪ್ಪ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದಿದ್ದ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡರಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಏನದು ಗಿಫ್ಟ್..? ಮುಂದೆ ಓದಿ...

ಬೆಂಗಳೂರು/ಯಾದಗಿರಿ, (ನ.06): ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಒತ್ತಡಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಮಣಿದಿದ್ದಾರೆ.

ಯಾದಗಿರಿ ಗುರುಮಿಟ್ಕಲ್ ಪಿಎಸ್ ಐ ಬಾಪುಗೌಡ ಅವರನ್ನು ವರ್ಗಾವಣೆ ಮಾಡಲು ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಹಾಗೆಯೇ ಪಿಎಸ್ ಐ ಬಾಬುಗೌಡಗೆ ರಜೆ ಮೇಲೆ ತೆರಳುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಒಂದ್ಕಡೆ ಪಿಎಸ್‌ಐ ವರ್ಗಾವಣೆ ಮಾಡಿ ಅಂತೀರಾ, ಈ ಠಾಣೆಗೆ CPIನೂ ಇಲ್ಲ, PSIನೂ ಇಲ್ಲ

ಜೆಡಿಎಸ್ ಕಾರ್ಯಕರ್ತನ ಮೇಲೆ ಪಿಎಸ್ ಐ ಬಾಪುಗೌಡ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಗುರುಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.ಈ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಭಾಗವಹಿಸಿ ಪಿಎಸ್ ಐ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು.

ಅಷ್ಟೇ ಅಲ್ಲದೇ ಪಿಎಸ್ ಐ ವಿರುದ್ದ ಕ್ರಮ ಕೈಗೊಳ್ಳದಿದ್ದರೇ ಸಿಎಂ ಯಡಿಯೂರಪ್ಪ ನಿವಾಸದ ಎದುರು ನ.15ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ದೇವೇಗೌಡರ ಎಚ್ಚರಿಕೆಗೆ ಬೇದರಿದ ಸಿಎಂ ಬಿಎಸ್ ವೈ ಯಾದಗಿರಿ ಪಿಎಸ್ ಐ ವರ್ಗಾವಣೆಗೆ ಆದೇಶ  ಹೊರಡಿಸಿದ್ದಾರೆ.

ಯಾದಗಿರಿ ಪಿಎಸೈ ವರ್ಗಾವಣೆ ಮಾಡುವಂತೆ ಸಿಎಂಗೆ ಪತ್ರ ಬರೆದ ದೇವೇಗೌಡ್ರು

ಕೆಲ ದಿನಗಳಿಂದೆ ಸ್ವತಃ ದೇವೇಗೌಡ್ರು ಯಾದಗಿರಿಗೆ ಹೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೂ. ಅಷ್ಟೇ ಅಲ್ಲದೇ ಪಿಎಸ್‌ಐ ವಿರುದ್ಧ ಕ್ರಮಕೈಗೊಳ್ಳುವಂತೆ ಬಿಎಸ್‌ವೈಗೆ ಪತ್ರ ಬರೆದಿದ್ದರು. ಆದ್ರೆ, ಅದಕ್ಕೆ ಯಡಿಯೂಪ್ಪ ಕ್ಯಾರೇ ಎಂದಿರಲಿಲ್ಲ.

 ಇದೀಗ ಬದಲಾದ ರಾಜಕೀಯ ವಿದ್ಯಾಮನದಲ್ಲಿ ನಿನ್ನೆ (ಮಂಗಳವಾರ) ಸರ್ಕಾರ ಬೀಳಿಸಲ್ಲ ಎಂದು ಯಡಿಯೂರಪ್ಪನವರ ಮೇಲೆ ಸಾಫ್ಟ್ ಕಾರ್ನರ್ ತೋರಿದಕ್ಕೆ ದೇವೇಗೌಡ್ರ ಬೇಡಿಕೆ ಈಡೇರಿಸಿದ್ದಾರೆ ಎನ್ನುವ ಚರ್ಚೆಗಳು ಸಹ ನಡೆದಿವೆ.

ಮಗ ಆಯ್ತು ಈಗ ಅಪ್ಪ ಸಾಫ್ಟ್: ಬೈ ಎಲೆಕ್ಷನ್ ರಿಸಲ್ಟ್ ಏನೇ ಆಗ್ಲೀ BSY ಸರ್ಕಾರ ಸೇಫ್

ಈ ಹಿಂದೆ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಯಡಿಯೂರಪ್ಪ ಕೃತಜ್ಞತೆ ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಒಳಗೊಳಗೆ ಒಂದಷ್ಟು ರಾಜ್ಯ ರಾಜಕೀಯ ಬೆಳವಣಿಗೆಗಳು ನಡೆದಿರುವುದಂತೂ ಸತ್ಯ.

click me!