1 ವರ್ಷದಲ್ಲಿ ಬಿಜೆಪಿ ಆಸ್ತಿ 270 ಕೋಟಿ ರು.ಏರಿಕೆ, ಕಾಂಗ್ರೆಸ್‌ ಕತೆ ಹೀಗಿದೆ!

Published : Aug 01, 2019, 09:45 AM IST
1 ವರ್ಷದಲ್ಲಿ ಬಿಜೆಪಿ ಆಸ್ತಿ 270 ಕೋಟಿ ರು.ಏರಿಕೆ, ಕಾಂಗ್ರೆಸ್‌ ಕತೆ ಹೀಗಿದೆ!

ಸಾರಾಂಶ

1 ವರ್ಷದಲ್ಲಿ ಬಿಜೆಪಿ ಆಸ್ತಿ 270 ಕೋಟಿ ರು.ಏರಿಕೆ, ಕಾಂಗ್ರೆಸ್‌ನದ್ದು 130 ಕೋಟಿ ಇಳಿಕೆ| 2018ರಲ್ಲಿ ಬಿಜೆಪಿ ಸಂಪತ್ತು 1,213 ಕೋಟಿ ರು.| ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯೇ ನಂ.1

ನವದೆಹಲಿ[ಆ.01]: ಹಿಂದಿನ ವರ್ಷಕ್ಕೆ ಹೋಲಿಸಿದರೆ 2017-18ರಲ್ಲಿ ಬಿಜೆಪಿಯ ಸಂಸತ್ತು 1,213 ಕೋಟಿ ರು.ಗಳಿಂದ 1,483 ಕೋಟಿ ರು.ಗೆ ಏರಿಕೆಯಾಗಿದೆ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಎಡಿಆರ್‌)ಯ ವರದಿ ತಿಳಿಸಿದೆ.

ಬಿಜೆಪಿ, ಕಾಂಗ್ರೆಸ್‌, ಎನ್‌ಸಿಪಿ, ಬಿಎಸ್‌ಪಿ, ಸಿಪಿಐ, ಸಿಪಿಎಂ ಹಾಗೂ ಟಿಎಂಸಿ ಪಕ್ಷಗಳು 2017​-18ನೇ ಸಾಲಿಗೆ ಆಸ್ತಿ ವಿವರವನ್ನು ಘೋಷಿಸಿವೆ. ಏಳೂ ಪಕ್ಷಗಳ ಆಸ್ತಿ ಶೇ.6ರಷ್ಟುಅಂದರೆ, 3,456 ಕೋಟಿ ರು.ಗಳಿಂದ 3,260 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಇದರಲ್ಲಿ ಬಿಜೆಪಿ ಸಿಂಹಪಾಲು ಪಡೆದುಕೊಂಡಿದೆ. ಈ ಅವಧಿಯಲ್ಲಿ ಬಿಜೆಪಿಯ ಆಸ್ತಿ ಶೇ.22ರಷ್ಟುಅಂದರೆ 1,213 ಕೋಟಿ ರು.ಗಳಿಂದ 1,483 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಬಿಜೆಪಿಗೆ 270 ಕೋಟಿ ರು. ಆದಾಯ ಹರಿದುಬಂದಿದೆ.

ಏಳು ರಾಷ್ಟ್ರೀಯ ಪಕ್ಷಗಳ ಪೈಕಿ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಪಕ್ಷಗಳ ಆಸ್ತಿ ಇಳಿಕೆ ಕಂಡಿದೆ. ಕಾಂಗ್ರೆಸ್‌ ಪಕ್ಷದ ಆಸ್ತಿ 854 ಕೋಟಿ ರು.ಗಳಿಂದ 724 ಕೋಟಿ ರು.ಗಳಿಗೆ ಇಳಿಕೆಯಾಗಿದೆ. ಅದೇ ರೀತಿ ಎನ್‌ಸಿಪಿಯ ಆಸ್ತಿ 11.41 ಕೋಟಿ ರು.ಗಳಿಂದ 9.54 ಕೋಟಿ ರು.ಗಳಿಗೆ ಇಳಿಕೆಯಾಗಿದೆ. ಆದರೆ, ಟಿಎಂಸಿಯ ಆಸ್ತಿ 10.86 ಕೋಟಿ ರು.ಗಳಿಂದ 26.25 ಕೋಟಿ ರು.ಗೆ ಏರಿದೆ.

ಇನ್ನೊಂದೆಡೆ ಬಿಎಸ್‌ಪಿಯ ಆಸ್ತಿ 680.63 ಕೋಟಿ ರು.ಗಳಿಂದ 716.72 ಕೋಟಿ ರು.ಗೆ ಏರಿದೆ. 463 ಕೋಟಿ ರು. ಇದ್ದ ಸಿಪಿಎಂ ಆಸ್ತಿ 482 ಕೋಟಿ ರು. ಆಗಿದೆ. ಸಿಪಿಐನ ಆಸ್ತಿ 10.88 ಕೋಟಿ ರು.ಗಳಿಂದ 11.49 ಕೋಟಿಗೆ ಏರಿದೆ.

ಇದೇ ವೇಳೆ ಕಾಂಗ್ರೆಸ್‌ 461 ಕೋಟಿ ರು. ಸಾಲ ಮಾಡಿದ್ದರೆ, ಬಿಜೆಪಿ 20.03 ಕೋಟಿ ರು. ಎರವಲು ಪಡೆದುಕೊಂಡಿದೆ ಎಂದು ಎಡಿಆರ್‌ ವರದಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?