ರಾಮಮಂದಿರ ಕಟ್ಟುವ ಮೊದಲು ಬಿಜೆಪಿ ನಾಯಕರು ನನ್ನ ಆಶೀರ್ವಾದ ಪಡೆಯಬೇಕು: ದೇಶಪಾಂಡೆ

Published : Dec 28, 2017, 12:47 PM ISTUpdated : Apr 11, 2018, 12:55 PM IST
ರಾಮಮಂದಿರ ಕಟ್ಟುವ ಮೊದಲು ಬಿಜೆಪಿ ನಾಯಕರು ನನ್ನ ಆಶೀರ್ವಾದ ಪಡೆಯಬೇಕು: ದೇಶಪಾಂಡೆ

ಸಾರಾಂಶ

ನಾನು ಹಿಂದೂ ಎಂದು ನನಗೆ ಹೆಮ್ಮೆ ಇದೆ. ನಾನು ಬ್ರಾಹ್ಮಣ ಎಂದು ಹೇಳಿಕೊಳ್ಳುವುದರಲ್ಲೂ ಹೆಮ್ಮೆಯಿದೆ ಎಂದು ರಾಜ್ಯ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.  

ಬೆಂಗಳೂರು (ಡಿ.28): ನಾನು ಹಿಂದೂ ಎಂದು ನನಗೆ ಹೆಮ್ಮೆ ಇದೆ.  ನಾನು ಬ್ರಾಹ್ಮಣ ಎಂದು ಹೇಳಿಕೊಳ್ಳುವುದರಲ್ಲೂ ಹೆಮ್ಮೆಯಿದೆ ಎಂದು ರಾಜ್ಯ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.  

ಇನ್ನು ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಾನು ರಾಮ ಅಂದಿದ್ದಾರೆ.  ನಾನು ಹೇಳುತ್ತೇನೆ ನಾನು ರಘುನಾಥ ಪ್ರಭು ರಾಮಚಂದ್ರನ ಅವತಾರ.  ರಾಮ ಮಂದಿರ ಕಟ್ಟುವ ಬಿಜೆಪಿ ನಾಯಕರುಮೊದಲು ನನ್ನ ಆಶೀರ್ವಾದ ಪಡೆಯಬೇಕು ಎಂದಿದ್ದಾರೆ.

ಎಲ್ಲ ಧರ್ಮದಲ್ಲಿಯೂ ಒಳ್ಳೆಯವರು ಇದ್ದಾರೆ. ಎಲ್ಲ ಧರ್ಮದಲ್ಲಿಯೂ ಕೆಟ್ಟವರು ಇದ್ದಾರೆ. ಜಾತಿಯ ವಿಷ ಬೀಜ ಬಿತ್ತಿ ಗಲಭೆ ನಡೆಸುವುದು ಸರಿಯಲ್ಲ.  ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ತಲೆ ಸರಿ ಇರೋದಿಲ್ಲ.  ಕಾನೂನು ಸುವವ್ಯಸ್ಥೆ ಕೆಡಿಸುವ ಕೆಲಸ ಮಾಡಬಾರದು. ರಾಜಕಾರಣಿಗಳು ಸಮಾಜದಲ್ಲಿ ಸರಿಯಾಗಿ ಕೆಲಸ ಮಾಡಬೇಕು.  ಸಮಾಜದಲ್ಲಿ ಶಾಂತಿ ಸುವವ್ಯಸ್ಥೆ ಕಾಪಾಡಲು ಶ್ರಮಿಸಬೇಕು.  ಚುನಾವಣೆ ಸಂದರ್ಭದಲ್ಲಿ ನಿಮ್ಮ ಪಕ್ಷದ ಕೆಲಸ ಮಾಡಲಿ.  ಇತ್ತೀಚಿಗೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆ ಸಂದರ್ಭದಲ್ಲಿ  ಅರಾಜಕತೆ ಸೃಷ್ಠಿಸುವ ಕೆಲಸ ಆಗಿದೆ.  ಸಮಾಜದಲ್ಲಿ ಇಂಥ ಕೆಲಸ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ದೇಶಪಾಂಡೆ  ಬಿಜೆಪಿ ನಾಯಕರಿಗೆ ನೀತಿ ಬೋಧನೆ ಮಾಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!