
ಬೆಂಗಳೂರು(ಸೆ.26): ಬಿಬಿಎಂಪಿಯಲ್ಲಿ ಮೇಯರ್ ಗಾದಿ ಈ ಬಾರಿ ನಮ್ಮದೇ ಎಂದು ಹೇಳಿಕೊಳ್ತಿದ್ದ ಬಿಜೆಪಿ ಇದ್ದಕ್ಕಿದ್ದಂತೆ ಮೌನವಾಗಿದೆ. ಅಲ್ಲದೇ ಜೆಡಿಎಸ್, ಕಾಂಗ್ರೆಸ್ ಏನು ಮಾಡುತ್ತಾರೆ ಎನ್ನುವುದನ್ನು ನೋಡುತ್ತೇವೆ ಎಂದು ರಾಗ ಬದಲಿಸಿದ್ದಾರೆ. ಹಾಗಾದರೆ ಕೇಸರಿ ಪಾಳಯ ಬಿಬಿಎಂಪಿ ಗದ್ದುಗೆ ಏರಲು ಯಾಕೆ ಹಿಂದೇಟು ಹಾಕುತ್ತಿದೆ? ಇಲ್ಲಿದೆ ವಿವರ.
ಬಿಬಿಎಂಪಿ ಗದ್ದುಗೆ ಏರಲು ಬಿಜೆಪಿ ಹಿಂದೇಟು
ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ಬಿಜೆಪಿ ಗದ್ದುಗೆ ಏರುವ ಕನಸು ಕಂಡಿತ್ತು. ಆದರೆ, ಅಳೆದು ತೂಗಿ ತನ್ನ ರಾಗ ಬದಲಿಸಿದೆ.
-ಒತ್ತುವರಿ ತೆರವಿಗೆ ಉತ್ತರಿಸಬೇಕಾದ ಅನಿವಾರ್ಯತೆ: ಕಸದ ಸಮಸ್ಯೆ ಎದುರಾದ್ರೆ ಪರಿಹಾರ ಸೂತ್ರ ಸದ್ಯಕ್ಕಿಲ್ಲ
ನಗರದಲ್ಲಿ ರಾಜಕಾಲುವೆ ಒತ್ತುವರಿ ನಡೆತಿದೆ. ಬಿಜೆಪಿ ಇದನ್ನು ವಿರೋಧಿಸುತ್ತಲೆ ಇದೆ. ಹೀಗಾಗಿ ಬಿಬಿಎಂಪಿ ಅಧಿಕಾರ ಬಿಜೆಪಿ ಕೈಗೆ ಬಂದ್ರೆ ಜನಸಾಮಾನ್ಯರಿಗೆ ಉತ್ತರಿಸಬೇಕಾದ ಅನಿವಾರ್ಯತೆ ಬರಲಿದೆ. ಇದಲ್ಲದೇ ಬೆಂಗಳೂರಲ್ಲಿ ಪ್ರತಿ ವರ್ಷ ಕಸದ ನಿರ್ವಹಣೆ ಸರಿಯಾಗಿ ನಡೆಯದೆ ನಗರ ಗೊಬ್ಬು ನಾರುತ್ತದೆ. ವರ್ಷಾಂತ್ಯದಲ್ಲಿ ಉಲ್ಭಣಿಸುವ ಕಸದ ಸಮಸ್ಯೆಗೆ ಬಿಜೆಪಿ ಉತ್ತರಿಸಬೇಕಾಗುತ್ತದೆ.
-ಕಾವೇರಿ ನೀರು ಕೊರತೆಯಾಗಿ ನಗರದಲ್ಲಿ ಹಾಹಾಕಾರ
ಇನ್ನು ಕುಡಿಯುವ ನೀರಿಗಾಗಿ ನಗರದಲ್ಲಿ ಹಾಹಾಕಾರ ತಪ್ಪಿದ್ದಲ್ಲ. ಈ ಬಾರಿ ಕಾವೇರಿ ಕಣಿವೆಯಲ್ಲಿ ನೀರಿನ ಕೊರತೆಯ ಮಧ್ಯೆಯೂ ತಮಿಳುನಾಡಿಗೆ ಸಾಕಷ್ಟು ನೀರು ಹರಿದಿದೆ. ಹೀಗಾಗಿ ಸಾರ್ವಜನಿಕರಿಗೆ ಉತ್ತರಿಸಬೇಕಾದ ಸನ್ನಿವೇಶಕ್ಕೆ ಬಿಜೆಪಿ ಎದರಿದೆ ಅಂತ ಹೇಳಲಾಗುತ್ತಿದೆ.
-ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 150 ಗೆ ಅಡ್ಡಿ
ಪಾಲಿಕೆ ಗದ್ದುಗೆಗೆ ಮೈತ್ರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಮೊದಲಿಂದಲೂ ಇತ್ತು. ಜೆಡಿಎಸ್ ಜೊತೆ ಪಾಲಿಕೆಯಲ್ಲಿ ಹೊಂದಾಣಿಕೆ ಮಾಡ್ಕೊಂಡ್ರೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಅನ್ನೋ ಆತಂಕವೂ ಇದೆ. ಈ ಎಲ್ಲಾ ಕಾರಣಗಳಿಂದಾಗಿ ಬಿಜೆಪಿ ಸದ್ಯ ಪಾಲಿಕೆ ಸಹವಾಸವೇ ಬೇಡ ಎನ್ನುವ ತಿರ್ಮಾನಕ್ಕೆ ಬಂದಿದೆ ಎನ್ನುವ ಮಾತು ಬಿಜೆಪಿ ಪಡಸಾಲೆಯಿಂದಲೇ ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.