ಅಮೆರಿಕಾ ಸೇನಾ ಮಾಹಿತಿ ಹ್ಯಾಕ್ ಮಾಡಿದವನಿಗೆ 20 ವರ್ಷ ಜೈಲು

By Internet DeskFirst Published Sep 25, 2016, 12:20 PM IST
Highlights

ಏಜನ್ಸಿ(ಸೆ.25): ಅಮೆರಿಕಾ ಸೇನಾ ಸಿಬ್ಬಂದಿಯ ಕೊಲ್ಲುವ ಪಟ್ಟಿಯನ್ನು ಐಎಸ್'ಐಎಸ್ ಹ್ಯಾಕರ್'ಗೆ ವಿರ್ಜೇನಿಯಾ ಫೆಡರಲ್ ಕೋರ್ಟ್ 20 ವರ್ಷ ಶಿಕ್ಷೆ ವಿಧಿಸಿದೆ.

ಕೊಸೊವಾ ನಾಗರಿಕನಾದ 20 ವರ್ಷದ ಅರ್ದಿತ್ ಫೆರ್ಜಿ ಅಮೆರಿಕಾದ ಕಾರ್ಪೋರೇಟ್ ಕಂಪ್ಯೂಟರ್'ಗಳಿಂದ ಅಮೆರಿಕಾ ಸೇನಾ ಸಿಬ್ಬಂದಿಯ ವಿವರಗಳನ್ನು ಹ್ಯಾಕ್ ಮಾಡಿ ಐಎಸ್'ಐಎಸ್'ಗೆ ರವಾನಿಸಿದ್ದ. 'ತಮ್ಮ ದೇಶದ ಸೇನಾ ಭದ್ರತೆಯ ಮಾಹಿತಿ ಸೈಬರ್ ಮೂಲಕ ಸೋರಿಕೆಯಾದ ಪ್ರಕರಣ ಇದೇ ಮೊದಲಾಗಿದ್ದು ಅತ್ಯಂತ ಅಪಾಯಕಾರಿಯಾದ ವಿಷಯವಾಗಿದೆ. ಸೇನಾ ಸಿಬ್ಬಂದಿಯ ಸೈಬರ್ ಮಾಹಿತಿಯ ಬಗ್ಗೆ ಅತ್ಯಂತ ಪರಿಣಾಮಕಾರಿಯಾದ ಕಾನೂನನ್ನು ಜಾರಿಗೊಳಿಸಬಹುದಾದ ಅಗತ್ಯವಿದೆ ಎಂದು ಅಮೆರಿಕಾದ ಅಟಾರ್ನಿ ಜನರಲ್ ಜಾನ್ ಕರ್ಲಿನ್ ತಿಳಿಸಿದ್ದಾರೆ.

Latest Videos

ಹ್ಯಾಕರ್ ಅರ್ದಿತ್ ಫೆರ್ಜಿ ಅಮೆರಿಕ ಸೇನಾ ಮಾಹಿತಿಯನ್ನು ಕದ್ದು ಜುನೈದ್ ಹುಸೇನ್ ಎಂಬಾತನಿಗೆ ಕಳುಹಿಸಿದ್ದ. ಜುನೈದ್ ಹುಸೇನ್'ನನ್ನು ಆಗಸ್ಟ್'ನಲ್ಲಿ ಸೇನಾ ವಾಯುದಾಳಿಯಲ್ಲಿ ಹತ್ಯೆಗಯ್ಯಲಾಗಿತ್ತು. ಅರ್ದಿತ್ ಫೆರ್ಜಿ ಅಮೆರಿಕಾ ಸೇನೆಯ ಹಾಗೂ ಸೇನಾ ಸಿಬ್ಬಂದಿಯ 1,351 ಮಾಹಿತಿಯನ್ನು ಹ್ಯಾಕ್ ಮಾಡಿದ್ದ.

click me!