ಪಕ್ಷ ವಿರೋಧಿ ಚಟುವಟಿಕೆ: 40 ಬಿಜೆಪಿ ಮುಖಂಡರಿಗೆ ಗೇಟ್ ಪಾಸ್!

By Web DeskFirst Published Sep 29, 2019, 8:36 PM IST
Highlights

40 ಮುಖಂಡರನ್ನು ಪಕ್ಷದಿಂದ ಹೊರಹಾಕಿದ ಬಿಜೆಪಿ/ ಉತ್ತರಾಖಂಡದಲ್ಲಿ ಪಕ್ಷದ ದಿಟ್ಟ ತೀರ್ಮಾನ/ ಪಕ್ಷ ವಿರೋಧಿ ಚಟುವಟಿಕೆಯಲ್ಲಿದ್ದವರಿಗೆ ಅರ್ಧಚಂದ್ರ

ನವದೆಹಲಿ[ಸೆ. 29]  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ  40 ಜನ ಮುಖಂಡರನ್ನು ಬಿಜೆಪಿ ಹೊರಹಾಕಿದೆ. ಉತ್ತರಾಖಂಡ ಬಿಜೆಪಿ ದಿಟ್ಟ ನಿರ್ಧಾರ ತೆರ ತೆಗೆದುಕೊಂಡಿದೆ. 

ಕೆಲ ದಿನಗಳ ಹಿಂದೆ ಶಾಸಕ ಕುನ್ವಾರ್ ಪ್ರಣವ್ ಸಿಂಗ್ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿತ್ತು. ಇದೀಗ 40 ಜನ ಮುಖಂಡರನ್ನು ಹೊರಹಾಕಿದೆ.

ರಾಜ್ಯ ಮಟ್ಟದಲ್ಲಿ ಪ್ರಮುಖ ನಾಯಕರೆಂದು ಗುರುತಿಸಿಕೊಂಡಿದ್ದ ರಜನೀಶ್ ಶರ್ಮಾ, ಮೀರಾ ರಟೌರಿ, ಮೋಹನ್ ಸಿಂಗ್ , ಮಹೇಶ್ ಭಾಗ್ರಿ, ಭವನ್ ಸಿಂಗ್ ಸೇರಿದಂತೆ 40 ಜನರನ್ನು ಹೊರಹಾಕಿದೆ.

ಗನ್ ಹಿಡಿದು ನೃತ್ಯ ಮಾಡಿದ್ದ ಶಾಸಕ ಕುನ್ವಾರ್ ಪ್ರಣವ್ ಸಿಂಗ್ ಅವರನ್ನು ಬಿಜೆಪಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿತ್ತು. ಶಾಸಕರ ಗನ್ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿತ್ತು.

ಬಾಯಲ್ಲೊಂದು, ಕೈಯಲ್ಲೆರಡು: ಉಚ್ಛಾಟಿತ ಬಿಜೆಪಿ ಶಾಸಕನ ಡ್ಯಾನ್ಸ್ ನೋಡು!

ಅವರು ಯಾರೇ ಆಗಿದ್ದರೂ ಸರಿ, ಎಷ್ಟು ದೊಡ್ಡ ನಾಯಕರಾಗಿದ್ದರೂ ಸರಿ ಪಕ್ಷದ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಂರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದ ನಂತರ ಇಂಥದ್ದೊಂದು ದಿಟ್ಟ ಕ್ರಮ ಬಂದಿದೆ.

ಒಟ್ಟಿನಲ್ಲಿ ಹಿರಿಯ ನಾಯಕರ ಆಣತಿಯಂತೆ ಉತ್ತರಾಖಂಡ ಬಿಜೆಪಿ ತೆಗೆದುಕೊಂಡಿರುವ ನಿರ್ಧಾರ ಉಳಿದ ರಾಜ್ಯಗಳ ನಾಯಕರಿಗೆ ಒಂದು ಕಡೆ ಎಚ್ಚರಿಕೆ ಘಂಟೆಯಾದರೆ ಇನ್ನೊಂದು ಕಡೆ ರಾಜಕಾರಣದ ಬದಲಾವಣೆಗೂ ಕಾರಣವಾಗಬಹುದು.

click me!