ಟಿಪ್ಪು ಜಯಂತಿ ಆಚರಿಸದಿರಲು ಬಿಜೆಪಿ ನಿರ್ಧಾರ; ಆಚರಿಸಿಯೇ ಸಿದ್ದ ಎಂದ ಕಾಂಗ್ರೆಸ್

Published : Oct 13, 2017, 09:50 PM ISTUpdated : Apr 11, 2018, 01:02 PM IST
ಟಿಪ್ಪು ಜಯಂತಿ ಆಚರಿಸದಿರಲು ಬಿಜೆಪಿ ನಿರ್ಧಾರ; ಆಚರಿಸಿಯೇ ಸಿದ್ದ ಎಂದ ಕಾಂಗ್ರೆಸ್

ಸಾರಾಂಶ

ಮತ್ತೇ ಟಿಪ್ಪು ಜಯಂತಿ ಆಚರಣೆ ವಿಚಾರ ಸದ್ದು ಮಾಡುತ್ತಿದೆ. ಕೊಡಗು ಜಿಲ್ಲಾ ಪಂಚಾಯತಿ ಟಿಪ್ಪು ಜಯಂತಿ ಆಚರಿಸುವುದಿಲ್ಲ ಅನ್ನೋ ನಿರ್ಣಯವನ್ನ ಕೈಗೊಂಡಿದೆ. ಬಿಜೆಪಿಯೂ ಕೂಡ ಟಿಪ್ಪು ಜಯಂತಿ ಆಚರಣೆ ಬೇಡ ಅಂತಾ ಪಟ್ಟು ಹಿಡಿದಿದೆ.

ಬೆಂಗಳೂರು (ಅ.13): ಮತ್ತೇ ಟಿಪ್ಪು ಜಯಂತಿ ಆಚರಣೆ ವಿಚಾರ ಸದ್ದು ಮಾಡುತ್ತಿದೆ. ಕೊಡಗು ಜಿಲ್ಲಾ ಪಂಚಾಯತಿ ಟಿಪ್ಪು ಜಯಂತಿ ಆಚರಿಸುವುದಿಲ್ಲ ಅನ್ನೋ ನಿರ್ಣಯವನ್ನ ಕೈಗೊಂಡಿದೆ. ಬಿಜೆಪಿಯೂ ಕೂಡ ಟಿಪ್ಪು ಜಯಂತಿ ಆಚರಣೆ ಬೇಡ ಅಂತಾ ಪಟ್ಟು ಹಿಡಿದಿದೆ.

ಮೈಸೂರು ಹುಲಿ ಎಂದೇ ಇತಿಹಾಸದಲ್ಲಿ ಕರೆಯಲ್ಪಡುವ ಟಿಪ್ಪು ಸುಲ್ತಾನ  ಜಯಂತಿ ಆಚರಣೆ ಮತ್ತೇ ವಿವಾದಕ್ಕೀಡಾಗಿದೆ. ಟಿಪ್ಪು ಸುಲ್ತಾನ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದೆ. ವಿವಾದದ ನಡುವೆಯೇ ಸರ್ಕಾರ ಈ ನಿರ್ಧಾರವನ್ನ ತಗೆದುಕೊಂಡಿತ್ತು. ಕಳೆದ ವರ್ಷ ಟಿಪ್ಪು ಜಯಂತಿ ಆಚರಣೆ ವೇಳೆ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಆದ್ರಿಂದ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆ ಬೇಡ ಅನ್ನೋ ನಿರ್ಣಯವನ್ನ ಆ ಜಿಲ್ಲಾ ಪಂಚಾಯತಿ ಕೈಗೊಂಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.

ಆದರೆ ಇದ್ಯಾವುದಕ್ಕೂ ಕ್ಯಾರೆ ಅನ್ನದ ರಾಜ್ಯ ಸರ್ಕಾರ ನವೆಂಬರ್ ಹತ್ತರಂದು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಅಂತಾ ಹೇಳಿದೆ. ಜೊತೆಗೆ ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕೊಡಗು ಜನತೆಗೆ ಟಿಪ್ಪು ಜಯಂತಿ ಬೇಡ ಅನ್ನೋ ನಿರ್ಣಯವನ್ನೇ ಅಲ್ಲಿನ ಜಿಲ್ಲಾ ಪಂಚಾಯತಿ ತಗೆದುಕೊಂಡಿದ್ದರೂ, ಸರ್ಕಾರ ಮಾತ್ರ ತನ್ನ ಮೊಂಡುತನವನ್ನ ಮುಂದುವರೆಸಿದೆ. ಕುಟ್ಟಪ್ಪ ಅನ್ನೋ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದ ಮತ್ತು ರಾಜ್ಯ ವ್ಯಾಪಿ ಸಾಕಷ್ಟು ಹಿಂಸೆಗೆ ಕಾರಣವಾದ ಇಂತಹ ಜಯಂತಿಗಳು ಬೇಕೇ ಅನ್ನೋದರ ಬಗ್ಗೆ  ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ