ದೆಹಲಿ-ಮುಂಬೈ ಜನತೆಗೆ ದೀಪಾವಳಿ ಗಿಫ್ಟ್; ಕಡಿಮೆ ಬೆಲೆಗೆ ಸಂಚರಿಸಲಿದೆ ರಾಜಧಾನಿ ಎಕ್ಸ್'ಪ್ರೆಸ್

Published : Oct 13, 2017, 08:55 PM ISTUpdated : Apr 11, 2018, 12:58 PM IST
ದೆಹಲಿ-ಮುಂಬೈ ಜನತೆಗೆ ದೀಪಾವಳಿ ಗಿಫ್ಟ್; ಕಡಿಮೆ ಬೆಲೆಗೆ ಸಂಚರಿಸಲಿದೆ ರಾಜಧಾನಿ ಎಕ್ಸ್'ಪ್ರೆಸ್

ಸಾರಾಂಶ

ದೆಹಲಿ-ಮುಂಬೈ ಜನತೆಗೆ ರೈಲ್ವೇ ಇಲಾಖೆ ದೀಪಾವಳಿ ಗಿಫ್ಟ್ ನೀಡುತ್ತಿದೆ. ಕಡಿಮೆ ಪ್ರಯಾಣ ದರದಲ್ಲಿ ವೇಗವಾದ ರಾಜಧಾನಿ ಎಕ್ಸ್’ಪ್ರೆಸ್ ದೆಹಲಿ-ಮುಂಬೈ ನಡುವೆ ಸಂಚರಿಸಲಿದೆ.

ನವದೆಹಲಿ (ಅ.13): ದೆಹಲಿ-ಮುಂಬೈ ಜನತೆಗೆ ರೈಲ್ವೇ ಇಲಾಖೆ ದೀಪಾವಳಿ ಗಿಫ್ಟ್ ನೀಡುತ್ತಿದೆ. ಕಡಿಮೆ ಪ್ರಯಾಣ ದರದಲ್ಲಿ ವೇಗವಾದ ರಾಜಧಾನಿ ಎಕ್ಸ್’ಪ್ರೆಸ್ ದೆಹಲಿ-ಮುಂಬೈ ನಡುವೆ ಸಂಚರಿಸಲಿದೆ.

ಈ ವಿಶೇಷ ರೈಲಿಗೆ  ಅ.16 ರಂದು ಚಾಲನೆ ನೀಡಲಿದ್ದು, ದೆಹಲಿಯ ಹಜರತ್ ನಿಜಾಮುದ್ದೀನ್ ಸ್ಟೇಷನ್’ನಿಂದ ಬಾಂದ್ರಾ ಟರ್ಮಿನಸ್’ಗೆ ಸಂಚರಿಸಲಿದೆ. ರಾಜಧಾನಿ ವಿಶೇಷ ರೈಲು ಪ್ರಯಾಣ ದರವನ್ನು 2  ತಾಸು ಕಡಿಮೆ ಮಾಡುವುದರ ಜೊತೆಗೆ ಇನ್ನೆರಡು ರಾಜಧಾನಿ ಎಕ್ಸ್’ಪ್ರೆಸ್’ಗೆ ಹೋಲಿಸಿದರೆ ಪ್ರಯಾಣಿಕರಿಗೆ ಪ್ರಯಾಣದರ 600-800 ರೂ ಕಡಿಮೆಯಾಗಲಿದೆ. ದೆಹಲಿಯಿಂದ ಮುಂಬೈ ತಲುಪಲು 14 ತಾಸು ತೆಗೆದುಕೊಳ್ಳಲಿದೆ. ಕೋಟಾ, ವಡೋದರಾ ಮತ್ತು ಸೂರತ್ ಮೂರು ಸ್ಟಾಪ್’ಗಳನ್ನು ಮಾತ್ರ ಕೊಡಲಾಗುತ್ತದೆ.

ಈ ವಿಶೇಷ ರಾಜಧಾನಿ ರೈಲು ಪ್ರಾಥಮಿಕವಾಗಿ ಅ.16 ರಿಂದ ಜ. 16 ರವರೆಗೆ 3 ತಿಂಗಳು ಓಡಲಿದೆ. ವಾರಕ್ಕೆ ಮೂರು ದಿನಗಳ ಕಾಲ ಸಂಚರಿಸಲಿದೆ. ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದೇ ನಮ್ಮ ಉದ್ದೇಶ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನವೋದಯ ವಿವಾದ: 'ನಮ್ಮದು ಒಕ್ಕೂಟ ಸಮಾಜ' ತಮಿಳುನಾಡಿಗೆ ಸುಪ್ರೀಂ ಕೋರ್ಟ್ ತಪರಾಕಿ
NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!