ಹ್ಯಾರಿಸ್ ‘ ರಕ್ಷಣೆ ಮಾಡುತ್ತಿರುವುದೇಕೆ..? ಬಿಜೆಪಿ ಕೇಳಿದ 7 ಪ್ರಶ್ನೆ

By Suvarna Web DeskFirst Published Feb 23, 2018, 9:41 AM IST
Highlights

ಶಾಸಕ ಪುತ್ರನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಅವರನ್ನು ರಕ್ಷಿಸುತ್ತಿದ್ದೀರೆಂದು ಆರೋಪಿಸಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಏಳು ಪ್ರಶ್ನೆಗಳನ್ನು ಹಾಕಿದೆ.

ಬೆಂಗಳೂರು : ಶಾಸಕ ಪುತ್ರನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಅವರನ್ನು ರಕ್ಷಿಸುತ್ತಿದ್ದೀರೆಂದು ಆರೋಪಿಸಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಏಳು ಪ್ರಶ್ನೆಗಳನ್ನು ಹಾಕಿದೆ.

ಅಲ್ಲದೆ, ಪ್ರಕರಣದಲ್ಲಿ ಸಂತ್ರಸ್ತರಿಗೆ ನಿಜವಾಗಿಯೂ ನ್ಯಾಯ ದೊರಬೇಕಾದರೆ ಶಾಸಕ ಸ್ಥಾನ ಹಾಗೂ ಪಕ್ಷದಿಂದ ಹ್ಯಾರಿಸ್ ಅವರನ್ನು ಉಚ್ಚಾಟಿಸಬೇಕು ಎಂದು ಒತ್ತಾಯಿಸಿದೆ. ಶಾಸಕ ಹ್ಯಾರಿಸ್ ಅವರು ಪ್ರಭಾವ ಬಳಸಿ ಪೊಲೀಸರ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಪ್ರಕರಣ ನಡೆದ ಕೂಡಲೇ ವಿಷಯ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಫ್‌ಐಆರ್ ದಾಖಲಿಸುವುದನ್ನು ತಡೆಯಲು ಯತ್ನಿಸಿದ್ದಾರೆ. ಶಾಸಕರ ಒತ್ತಡಕ್ಕೊಳಗಾಗಿ ಪೊಲೀಸರು ಆರೋಪಿ ನಲಪಾಡ್ ವಿರುದ್ಧ ಸೆಕ್ಷನ್ 307(ಕೊಲೆ ಯತ್ನ ಪ್ರಕರಣ) ದಾಖಲಿಸಲಿಲ್ಲ?

ಶಾಸಕರ ಒತ್ತಡಕ್ಕೆ ಮಣಿದು ಪೊಲೀಸರು ಘಟನೆ ನಡೆದ ಕೂಡಲೇ ಆರೋಪಿಯನ್ನು ಬಂಧಿಸಿಲ್ಲ. ಅಲ್ಲದೆ, ರೌಡಿಶೀಟರ್ ಪಟ್ಟಿ ತೆರೆಯದಂತೆ ಒತ್ತಡ ಹೇರಿ ಕಾನೂನು ಉಲ್ಲಂಘನೆಯಾಗಿದೆ. ಇದು ಅಧಿಕಾರದ ದುರುಪಯೋ ಗವಲ್ಲದೆ, ಅಧಿಕಾರಿಗಳ ಮೇಲೆ ಬೀರಿದ ಪ್ರಭಾವವೇ? ಇನ್ನು ಶಾಸಕರು 38 ಗಂಟೆಗಳ ಕಾಲ ಪುತ್ರನನ್ನ ಮನೆಯಲ್ಲಿಟ್ಟುಕೊಂಡು ಬಳಿಕ ಪೊಲೀಸರಿಗೆ ಶರಣಾಗುವಂತೆ ನೋಡಿಕೊಂಡರು.

ಇದು ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರಿದಂತಲ್ಲವೇ?

ಅಪರಾಧ ಮುಚ್ಚಿಹಾಕಲು ಯತ್ನಿಸಿರುವುದು ದುರುಪಯೋ ಗ ವಲ್ಲವೇ? ಶಾಸಕರ ಆದೇಶ ಪಾಲಿಸಿದ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತುಗೊಂಡರು. ವಿಚಿತ್ರವೆಂದರೆ ಆದೇಶ ಕೊಟ್ಟ ವರು ಸೇಫ್ ಆಗಿದ್ದರೆ, ಆದೇಶ ಪಾಲಿಸಿದ ವ್ಯಕ್ತಿ ಅಮಾನತ್ತಾಗಿರುವುದು ಯಾವ ನ್ಯಾಯ? ಇಂತಹ ಶಾಸಕರನ್ನು ಮುಖ್ಯ ಮಂತ್ರಿ ಏಕೆ ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಲಾಗಿದೆ.

ಶಾಸಕರ ಬೆಂಬಲಿಗರು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಲು ಪ್ರಚೋದನೆ ನೀಡಿದವರ ವಿರುದ್ಧ ಪ್ರಕರಣ ದಾಖಲಾಗಬೇಕಲ್ಲವೇ?, ಸಿದ್ದರಾಮಯ್ಯ ಅವರು ಶಾಸಕ ಹ್ಯಾರಿಸ್ ಅವರನ್ನು ರಕ್ಷಿಸುತ್ತಿದ್ದಾರೆ. ಏಕೆಂದರೆ ಹ್ಯಾರಿಸ್ ಕಾಂಗ್ರೆಸ್‌ಗೆ ಹಣ ನೀಡುವ ಬ್ಯಾಂಕ್ ಆಗಿದ್ದಾರೆ? ಇಲ್ಲವೆ ರಾಹುಲ್‌ಗಾಂಧಿಗೆ ಬಹಳ ಹತ್ತಿರವಿರುವ ಕಾರಣ ಅವರನ್ನು ರಕ್ಷಿಸಲಾಗುತ್ತಿದೆಯೇ ಎಂದು ಪ್ರಶ್ನೆ ಹಾಕಲಾಗಿದೆ.

click me!