
ಪಟನಾ[ಡಿ.16]: ಎನ್‌ಡಿಎ ದ ಮುಖ್ಯ ಪಾಲುದಾರ ಪಕ್ಷವಾಗಿರುವ ಜೆಡಿಯು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದೇ ಆದಲ್ಲಿ ಅದಕ್ಕೆ ತನ್ನ ಸಮ್ಮತಿ ಇಲ್ಲವೆಂದು ಸ್ಪಷ್ಟೀಕರಿಸಿದೆ.
‘ಪರಸ್ಪರ ಒಪ್ಪಿಗೆ ಇಲ್ಲವೇ ನ್ಯಾಯಾಲಯ ಮೂಲಕವೇ ರಾಮಮಂದಿರ ವಿಷಯ ಇತ್ಯರ್ಥವಾಗಬೇಕು ಎಂಬ ನಮ್ಮ ಹಿಂದಿನ ತೀರ್ಮಾನಗಳಿಗೆ ನಾವು ಈಗಲೂ ಬದ್ಧ ಎಂದು’ ಎಂದು ಜೆಡಿ(ಯು) ದ ಕಾರ್ಯದರ್ಶಿ ರಾಮಚಂದ್ರ ಪ್ರಸಾದ್ ಸಿಂಗ್ ಹೇಳಿದ್ದಾರೆ.
ನಾವು ಸಮತಾಪಕ್ಷದಲ್ಲಿ ಇದ್ದ ದಿನಗಳಿಂದಲೂ ಇದೇ ಅಭಿಪ್ರಾಯ ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ