
ಹೈದರಾಬಾದ್ (ನ.21): ಹೈದ್ರಾಬಾದ್'ನಲ್ಲಿ ನ. 27ರಂದು ನಡೆಯುವ ಜಾಗತಿಕ ವಾಣಿಜ್ಯೋದ್ಯಮಿಗಳ ಶೃಂಗ ಸಭೆಯಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕ ಟ್ರಂಪ್ ಆಗಮಿಸುತ್ತಿದ್ದಾರೆ. ಈ ವೇಳೆ ಇವಾಂಕ ಇಲ್ಲಿನ ಫಲಕ್'ನುಮಾ ಅರಮನೆಯಲ್ಲಿ ವಿಶೇಷವಾದ ಡೈನಿಂಗ್ ಟೇಬಲ್'ನಲ್ಲಿ ಭೋಜನ ಸವಿಯಲಿದ್ದಾರೆ. ಒಟ್ಟು 101 ಜನರ ಒಟ್ಟಿಗೆ ಕುಳಿತು ಆಹಾರ ಸವಿಯಬಹುದಾದ ಟೇಬಲ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಮುಖ್ಯಸ್ಥರು ಕುಳಿತು ಭೋಜನ ಸೇವಿಸಲಿದ್ದಾರೆ. ಈ ಟೇಬಲ್ ವಿಶ್ವದ ಅಂತ್ಯಂತ ದೊಡ್ಡದಾದ ಡೈನಿಂಗ್ ಟೇಬಲ್ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ.
ಇವಾಂಕ್'ಗೆ ಡೈನಿಂಗ್ ಹಾಲ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ತೆಲಂಗಾಣದ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿಗಳಾದ ಕೆ.ಸಿ ರಾವ್, ಚಂದ್ರಬಾಬು ನಾಯ್ಡು ಸಾಥ್ ನೀಡಲಿದ್ದಾರೆ. ಅಷ್ಟೇ ಅಲ್ಲದೇ ಛತ್ತೀಘಡ, ಗುಜರಾತ್ ಮತ್ತು ಮಹರಾಷ್ಟ್ರದ ಮುಖ್ಯಮಂತ್ರಿಗಳೂ ಈ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಈ ಶೃಂಗ ಸಭೆಯಲ್ಲಿ ಇತರೆ ದೇಶಗಳ 1400 ಗಣ್ಯರೂ ಕೂಡ ಭಾಗಿಯಾಗಲಿದ್ದು, ಎಲ್ಲರಿಗೂ ಕೂಡ ವಿಶೇಷವಾದ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಇನ್ನು ಇವಾಂಕ ಆಗಮನದ ಹಿನ್ನೆಲೆಯಲ್ಲಿ ಈ ಹೋಟೆಲ್ ಸುತ್ತಮುತ್ತಲ ಪ್ರದೇಶಗಳಲ್ಲಿ ಸೂಕ್ತ ಬಿಗಿ ಭದ್ರತೆಯನ್ನು ಕಲ್ಪಿಸಲಾಗುತ್ತಿದೆ. ನವೆಂಬರ್ 28 - 29ರಂದು ಗಣ್ಯಾತಿಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಫಲಕ್'ನುಮಾ ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.