ದಾನಿಗಳ ಬದಲು ತನ್ನ ವೀರ್ಯ ಬಳಸಿ 49 ಮಕ್ಕಳ ತಂದೆಯಾದ ಡಚ್‌ ವೈದ್ಯ!

By Web Desk  |  First Published Apr 14, 2019, 10:53 AM IST

ದಾನಿಗಳ ಬದಲು ತನ್ನ ವೀರ್ಯ ಬಳಸಿ 49 ಮಕ್ಕಳ ತಂದೆಯಾದ ಡಚ್‌ ವೈದ್ಯ!| ಡಿಎನ್‌ಎ ಪರೀಕ್ಷೆ ಬಳಿಕ ತಂದೆ ಯಾರೆಂದು ಬಹಿರಂಗ


ನವದೆಹಲಿ[ಏ.14]: ಡಚ್‌ ವೈದ್ಯನೊಬ್ಬ ದಾನಿಗಳು ನೀಡಿದ ವೀರ್ಯದ ಬದಲು ತನ್ನ ವೀರ್ಯವನ್ನೇ ಬಳಸಿ 49 ಪ್ರನಾಳ ಶಿಶುಗಳಿಗೆ ಜನ್ಮ ನೀಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಕಳೆದ ವರ್ಷ ಸಾವಿಗೀಡಾಗಿದ್ದ ಡಾ| ಜಾನ್‌ ಕಾರ್ಬೇಟ್‌ ಎಂಬಾತ ನೆದರ್ಲೆಂಡ್‌ ರೋಟರ್ಡ್‌ಡಮ್‌ನಲ್ಲಿರುವ ತನ್ನ ಕ್ಲಿನಿಕ್‌ನಲ್ಲಿ ಗರ್ಭಧಾರಣೆಗೆಂದು ಬರುವ ಮಹಿಳೆಯರಿಗೆ ದಾನಿಗಳ ವೀರ್ಯದ ಬದಲು ರಹಸ್ಯವಾಗಿ ತನ್ನ ವೀರ್ಯವನ್ನೇ ಉಪಯೋಗಿಸುತ್ತಿದ್ದ. ಬಹುತೇಕ ಮಕ್ಕಳು 1980ರ ದಶಕದಲ್ಲಿ ಜನಿಸಿದ್ದವು. ಆದರೆ, ಅವರಲ್ಲಿ ಕೆಲವರು ಕಾರ್ಬೇಟ್‌ ಅವರನ್ನೇ ಹೊಲುತ್ತಿದ್ದರಿಂದ ಕಾರಣ, ಮಕ್ಕಳು ಮತ್ತು ಪೋಷಕರ ಸಂಘಟನೆ ಕಾರ್ಬೇಟ್‌ ಅವರ ಡಿಎನ್‌ಎ ಪರೀಕ್ಷೆ ಕೋರಿ ಕೋರ್ಟ್‌ ಮೊರೆ ಹೋಗಿತ್ತು. ಆದರೆ ಕಾರ್ಬೇಟ್‌ ಅವರ ಕುಟುಂಬ ಈ ಆರೋಪವನ್ನು ನಿರಾಕರಿತ್ತು.

Latest Videos

undefined

ಆದರೆ, ಕೋರ್ಟ್‌ ಮಕ್ಕಳ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಕೊರ್ಟ್‌ ತನಿಖೆಗೆ ಆದೇಶಿಸಿತ್ತು. ದಶಕಗಳ ಬಳಿಕ ಇದೀಗ ಡಿಎನ್‌ಎ ವರದಿ ಬಹಿರಂಗೊಂಡಿದೆ. ಕಾರ್ಬೇಟ್‌ ತಮ್ಮ ವೀರ್ಯವನ್ನು ಬಳಸಿ 49 ಮಕ್ಕಳ ತಂದೆ ಆಗಿದ್ದಾರೆ ಎಂಬುದು ಸಾಬೀತಾಗಿದೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28

click me!