ಗುಂಡು ಹಾರಿಸಿಕೊಂಡು ಸ್ವಯಂಘೋಷಿತ ದೇವಮಾನವ ಆತ್ಮಹತ್ಯೆ..!

Published : Jun 12, 2018, 03:17 PM IST
ಗುಂಡು ಹಾರಿಸಿಕೊಂಡು ಸ್ವಯಂಘೋಷಿತ ದೇವಮಾನವ ಆತ್ಮಹತ್ಯೆ..!

ಸಾರಾಂಶ

ಗುಂಡು ಹಾರಿಸಿಕೊಂಡು ಸ್ವಯಂಘೊಷಿತ ದೇವಮಾನವ ಆತ್ಮಹತ್ಯೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಭಯ್ಯೂಜೀ ಮಹಾರಾಜ್ ಮಧ್ಯಪ್ರದೇಶದ ಇಂಧೋರ್ ನಲ್ಲಿ ಘಟನೆ ಆಧ್ಯಾತ್ಮಿಕ ಗುರುವಾಗಿ ಖ್ಯಾತಿ ಗಳಿಸಿದ್ದ ಭಯ್ಯೂಜೀ

ಇಂಧೋರ್(ಜೂ.12): ದೇಶ ಕಂಡ ಅಪರೂಪದ ಮತ್ತು ಜನಪ್ರೀಯ ಆಧ್ಯಾತ್ಮಿಕ ಗುರು ಭಯ್ಯೂಜೀ ಮಹಾರಾಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಇಂಧೋರ್ ನಲ್ಲಿರುವ ಅವರ ಮನೆಯಲ್ಲಿ ಭಯ್ಯೂಜೀ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೂಲತಃ ಮಹಾರಾಷ್ಟ್ರದವರಾದ ಉದಯಸಿಂಗ್ ದೇಶಮುಖ್, ಸ್ವಯಂಘೊಷಿತ ದೇವಮಾನವರಾಗಿ ಪ್ರಸಿದ್ದಿಗೆ ಬಂದವರು. ಮಹಾರಾಷ್ಟ್ರದ ಹಲವು ರಾಜಕಾರಣಿಗಳ ಜೊತೆ ಒಡನಾಟ ಹೊಂದಿದ್ದ ಅವರು, ನಂತರ ಮಧ್ಯಪ್ರದೇಶದ ಇಂಧೋರ್ ಗೆ ಬಂದು ನೆಲೆಸಿದ್ದರು. ಇತ್ತಿಚೀಗಷ್ಟೇ ಮಧ್ಯಪ್ರದೇಶ ಸರ್ಕಾರ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನ ಕೂಡ ನೀಡಿತ್ತು. ಮಧ್ಯಪ್ರದೇಶ ಸರ್ಕಾರ ಇತ್ತೀಚಿಗೆ ೫ ಜನ ಸ್ವಾಮಿಜೀಗಳಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಿತ್ತು, ಅದರಲ್ಲಿ ಭಯ್ಯೂಜೀ ಕೂಡ ಒಬ್ಬರಾಗಿದ್ದರು. ಭ್ರಷ್ಟಾಚಾರ ವಿರುದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನಡೆಸಿದ್ದ ಹೋರಾಟದಲ್ಲೂ ಭಯ್ಯೂಜೀ ಕಾಣಿಸಿಕೊಂಡಿದ್ದರು.

ಇನ್ನು ಭಯ್ಯೂಜೀ ಅವಾರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ, ಇತ್ತಿಚೀಗೆ ಅವರ ಮೊದಲ ಪತ್ನಿ ನಿಧನ ಹೊಂದಿದ್ದರು. ಈ ಹಿನ್ನಲೆಯಲ್ಲಿ ಎರಡನೇ ಮದುವೆಯಾಗಿದ್ದ ಭಯ್ಯೂಜೀ, ತಮ್ಮ ಸಂಸಾರದ ತೊಂದರೆಗಳನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ. ತಲೆಗೆ ಗುಂಡು ಹೊಡೆದುಕೊಂಡ ಭಯ್ಯೂಜೀ ಅವರನ್ನು ಇಂಧೋರ್ ನ ಬಾಂಬೆ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆಯೇ ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mysore: ಗೌರವ ಕೊಡದ ಹೆಂಡ್ತಿ ಕೊಲ್ಲಲು ಸುಪಾರಿ ಕೊಟ್ಟ ಪತಿರಾಯ!
ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?