
ಬೆಂಗಳೂರು: ಪಿಎಸ್ಐಯೊಬ್ಬರು ಅಕ್ರಮ ದಂಧೆಕೋರರ ಪರ ಮಾತನಾಡಿದ ಮೇಲಾಧಿಕಾರಿಯ ಚಳಿ ಬಿಡಿಸಿದ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.
ಅಕ್ರಮವಾಗಿ ಗ್ರಾನೈಟ್ ತುಂಬಿದ್ದ ಲಾರಿ ಬಿಟ್ಟು ಬರುವಂತೆ ಸಿಬ್ಬಂದಿಗೆ ಒತ್ತಡ ಹಾಕಿದ ಮೇಲಾಧಿಕಾರಿಗೆ ಪಿಎಸ್ಐ ಶ್ರೀನಿವಾಸ್ ಪೋನಿನಲ್ಲೆ ಖಡಕ್ ಅವಾಜ್ ಹಾಕಿದ್ದಾರೆ.
ದೇವನಹಳ್ಳಿ ತಾಲೂಕಿನ ರಾಮನಾಥಪುರದಲ್ಲಿ ಘಟನೆ. ನಡೆದಿದ್ದು, ಅಕ್ರಮವಾಗಿ ಗ್ರಾನೈಟ್ ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಶ್ವನಾಥಪುರ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ, ಗ್ರಾನೈಟ್ ಸಾಗಿಸಲು ಅನುಮತಿ ಇಲ್ಲದಿದ್ದರೂ ಹಿರಿಯ ಅಧಿಕಾರಿಗಳ ಹೆಸರು ಹೇಳಿ ಲಾರಿಯವರು ಸಿಬ್ಬಂದಿಗೆ ಧಮ್ಕಿ ಹಾಕಿದ್ದಾರೆ.
"
ದಂಧೆಕೋರರಿಂದ ಧಮ್ಕಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪಿಎಸ್ಐ ಶ್ರೀನಿವಾಸ್ ಗೂ ಹಿರಿಯ ಪೊಲೀಸ್ ಅಧಿಕಾರಿ ಮುಖಾಂತರ ಒತ್ತಡ ಹೇರಿದ್ದ ದೇವನಹಳ್ಳಿ ಮಾಜಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಎನ್.ಕೃಷ್ಣಮೂರ್ತಿ ಮತ್ತು ಬೆಂಬಲಿಗರು. ಪರವನಾಗಿಯಿಲ್ಲದೆ ಹಿಡಿದಿದ್ದ 2 ಲಾರಿಗಳನ್ನ ಬಿಟ್ಟು ಕಳಿಸುವಂತೆ ಪಿಎಸ್ಐ ಶ್ರೀನಿವಾಸ್ ಗೆ ಒತ್ತಡ ಹೇರಿದ್ದಾರೆ.
ಪಿಎಸ್ಐ ಮೇಲೆ ವಿಜಯಪುರ ಸಿಪಿಐ ಮಂಜುನಾಥ್ ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು, ಒತ್ತಡಕ್ಕೆ ಮಣಿಯದೆ ಸಿಂಗಂ ಸ್ಟೈಲ್ ನಲ್ಲಿ ಪೋನ್ ನಲ್ಲಿ ಸಿಪಿಐಗೆ ಶ್ರೀನಿವಾಸ್ ಬಿಸಿ ಮುಟ್ಟಿಸಿದ್ದಾರೆ.
ದಂಧೆಕೋರರ ಪರ ಮಾತನಾಡಿದ ಸಿಪಿಐ ವರ್ತನೆಗೆ ಗರಂ ಆಗಿ ಪೋನಿನಲ್ಲೆ ಸಿಪಿಐ ಗೆ ಲೆಫ್ಟ್ ಅಂಡ್ ರೈಟ್ ಕ್ಲಾಸ್ ತೆಗೆದುಕೊಂಡ ವಿಶ್ವನಾಥಪುರ ಠಾಣೆ ಪಿಎಸ್ಐ ಶ್ರೀನಿವಾಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಎಸ್ಐ ಶ್ರೀನಿವಾಸ್ ದಕ್ಷತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.