ನನ್ನನ್ನು ಕಡೆಗಣಿಸಿ ಸರ್ಕಾರ ನಡೆಸುತ್ತೇವೆ ಎಂದುಕೊಂಡಿದ್ದರೆ ಹುಷಾರ್: ಸಿದ್ದರಾಮಯ್ಯ

First Published Jun 12, 2018, 2:11 PM IST
Highlights

ದಿಲ್ಲಿ ಹೈಕಮಾಂಡ್ ನಾಯಕರ ಲೆಕ್ಕಾಚಾರದ ಪ್ರಕಾರ ಭಿನ್ನಮತೀಯ ಚಟುವಟಿಕೆಗಳಿಗೆ ಸಿದ್ದರಾಮಯ್ಯ ಅವರ ಆಶೀರ್ವಾದವಿದೆ. ಇಲ್ಲವಾದಲ್ಲಿ ಎಂ ಬಿ ಪಾಟೀಲರಿಂದ ಹಿಡಿದು ಹ್ಯಾರಿಸ್‌ವರೆಗೆ ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡುವ ಧೈರ್ಯ ತೋರಲು ಸಾಧ್ಯವಿರಲಿಲ್ಲವಂತೆ. 

ಸಿದ್ದು ಇಂಥ ಚಟುವಟಿಕೆಗಳ ಮುಖಾಂತರ ‘ನೋಡಿ ನಾನು ಹೇಗೆ 5 ವರ್ಷ ಭಿನ್ನಮತದ ಸೊಲ್ಲು ಇಲ್ಲದಂತೆ ಅಧಿಕಾರ ನಡೆಸಿದ್ದೇನೆ. ಆದರೆ ಪರಮೇಶ್ವರ್ ಅವರಿಗೆ ಹಿಡಿತ ಇಲ್ಲ. ನನ್ನನ್ನು ಕಡೆಗಣಿಸಿ ಸರ್ಕಾರ ನಡೆಸುತ್ತೇವೆ ಎಂದುಕೊಂಡಿದ್ದರೆ ಹುಷಾರು’ ಎಂದು ದಿಲ್ಲಿ ಹೈಕಮಾಂಡ್‌ಗೆ ಸಂಕೇತ ಕೊಡುವ ಪ್ರಯತ್ನ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ನ ಹಾಗೂ ಸರ್ಕಾರದ ಸ್ಥಿರತೆಯ ಜುಟ್ಟು ತನ್ನ ಕೈಯಲ್ಲಿದೆ ಎಂದು ದೇವೇಗೌಡರ ಕುಟುಂಬಕ್ಕೂ ಹೇಳುವ ಪ್ರಯತ್ನವಿದು ಎಂದು ಹೇಳಲಾಗುತ್ತಿದೆ. ಅಂದ ಹಾಗೆ ಇಷ್ಟೆಲ್ಲಾ ನಡೆಯುವಾಗ  ಸಿದ್ದರಾಮಯ್ಯ ಬಾದಾಮಿಯಲ್ಲಿ ಮತದಾರ ಪ್ರಭುವಿಗೆ ಧನ್ಯವಾದ ಹೇಳುತ್ತಿದ್ದರು!  

-ಪ್ರಶಾಂತ್ ನಾತು , ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

click me!