ಪ್ರೇಮಿಗಳ ದಿನದಂದೇ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ರಾ?

By Web DeskFirst Published Feb 14, 2019, 1:42 PM IST
Highlights

ಜಗತ್ತಿನಾದ್ಯಂತ ಇಂದು ಅತ್ಯಂತ ಸಡಗರದಿಂದ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತಿದೆ. ಜಾತಿ-ಧರ್ಮ-ಭಾಷೆ ಮೀರಿದ ಪ್ರೀತಿಗೆ ಯಾವುದೇ ಗಡಿಯ ಹಂಗಿಲ್ಲ ಬಿಡಿ. ವ್ಯಾಲೆಂಟೈನ್ ಎನ್ನುವ ಸಂತನ ನೆನಪಿನಲ್ಲಿ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ.

ಜಗತ್ತಿನಾದ್ಯಂತ ಇಂದು ಅತ್ಯಂತ ಸಡಗರದಿಂದ ವ್ಯಾಲೆಂಟೈನ್ ಡೇ ಆಚರಿಸಲಾಗುತ್ತಿದೆ. ಜಾತಿ-ಧರ್ಮ-ಭಾಷೆ ಮೀರಿದ ಪ್ರೀತಿಗೆ ಯಾವುದೇ ಗಡಿಯ ಹಂಗಿಲ್ಲ ಬಿಡಿ. ವ್ಯಾಲೆಂಟೈನ್ ಎನ್ನುವ ಸಂತನ ನೆನಪಿನಲ್ಲಿ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. 
ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತದಲ್ಲಿ ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನವನ್ನಾಗಿ ಆಚರಿಸಿ ಎನ್ನುವ ಮಾತುಗಳೂ ಕೇಳಿಬರುತ್ತಿವೆ. 

ದುರಂತವೆಂದರೆ ಇವೆಲ್ಲವುಗಳಿಗಿಂತ ಮುಂದೆ ಹೋಗಿ ಕೆಲವು ಫೋಟೋಶಾಪ್ ವೀರರು, ಫೆಬ್ರವರಿ 14ರಂದು ದೇಶದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಥಾಪರ್ ಹಾಗೂ ಶಿವರಾಮ್ ರಾಜ್‌ಗುರು ಅವರನ್ನು ಗಲ್ಲಿಗೇರಿಸಿದ ದಿನ, ಹೀಗಾಗಿ 'ಶಹೀದ್ ದಿವಸ್'[ಹುತಾತ್ಮರ ದಿನ] ಎಂದು ಆಚರಿಸಿ...ಎಂದು ಹಸಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ಇಂಥದೊಂದು ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಸತ್ಯವೇನು?

ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ತಾಯ್ನಾಡಿಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರು ಬಗ್ಗೆ ಇಡೀ ದೇಶಕ್ಕೇ ಹೆಮ್ಮೆ ಇದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. 'ಲಾಹೋರ್ ಪಿತೂರಿ ಪ್ರಕರಣ'ದಲ್ಲಿ ಭಗತ್ ಸಿಂಗ್ ಅವರನ್ನು ಬಂಧಿಸಿ ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿ 1930ರ ಅಕ್ಟೋಬರ್ 07ರಂದು ಕೋರ್ಟ್ ಮರಣದಂಡನೆ ತೀರ್ಪು ಪ್ರಕಟಿಸಿತು. 1931ರ ಮಾರ್ಚ್ 23ರಂದು ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರ್ ಅವರನ್ನು ಗಲ್ಲಿಗೇರಿಸಲಾಯಿತು. 

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸಿದ ಮೋದಿ

ಬ್ರಿಟಿಷರ ವಿರುದ್ಧ ಹೋರಾಡಿ ಕೇವಲ 23ನೇ ವಯಸ್ಸಿಗೆ ಬಲಿದಾನ ಮಾಡಿಕೊಂಡ ಮಹಾನ್ ದೇಶಪ್ರೇಮಿ ಭಗತ್ ಸಿಂಗ್ ಇಂದಿನ ಯುವಕರ 'ಐಕಾನ್'. 'ಇಂಕ್ವಿಲಾಬ್ ಜಿಂದಾಬಾದ್' ಘೋಷಣೆ ಕೇಳಿದರೆ ಪ್ರತಿಯೊಬ್ಬರಲ್ಲೂ ದೇಶಪ್ರೇಮ ಉಕ್ಕಿ ಹರಿಯುತ್ತದೆ. ಆದರೆ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸುವ ಭರದಲ್ಲಿ, ಈ ದಿನವನ್ನು ದೇಶದ ಮಹಾನ್ ಹುತಾತ್ಮರ ಪುಣ್ಯ ದಿನವೆಂದು ಕರೆಯುವುದು ಎಷ್ಟು ಸರಿ?

ಇಂಥ ವಿಕೃತಿಯನ್ನು ವಿರೋಧಿಸೋಣ. ಸುಳ್ಳು ಸುದ್ದಿಯನ್ನು ಕ್ರಾಸ್ ಚೆಕ್ ಮಾಡದೇ ಹಲವು ಮಂದಿ ಫೇಸ್‌ಬುಕ್, ವಾಟ್ಸ್‌ ಆ್ಯಪ್‌ಗಳಲ್ಲಿ ಹಂಚಿಕೊಂಡು ಸುಳ್ಳನ್ನೇ ಸತ್ಯವೆಂದು ಹರಡುತ್ತಿದ್ದಾರೆ. ಫೆಬ್ರವರಿ 14ರಂದು ಭಗತ್ ಸಿಂಗ್ ನೇಣಿಗೇರಿದ ದಿನ ಎಂದೂ ’ಶಹೀದ್ ದಿವಸ’ ಎಂದು ಆಚರಿಸಿಕೊಳ್ಳುವುದು ಆ ಮಹಾನ್ ರಾಷ್ಟ್ರಚೇತನಗಳಿಗೆ ಮಾಡುವ ಅವಮಾನವಲ್ಲವೇ..?

ಇದನ್ನೂ ಓದಿ: ಪ್ರೇಮ ದಿನ ಪ್ರೇಮಿಗಳಿಗಾ, ದಂಪತಿಗಳಿಗಾ?

click me!