ಎಚ್ಚರ ... ನಮ್ಮ ಸುತ್ತಲೇ ಫೇಸ್‌ಬುಕ್ ವಂಚಕರಿದ್ದಾರೆ ಹುಷಾರ್...!

First Published Jul 1, 2018, 3:03 PM IST
Highlights

ಇದು ಎಲ್ಲರೂ ಓದಲೇಬೇಕಾದ ಎಚ್ಚರಿಕೆ ಸಾರುವ ಸ್ಟೋರಿ.. ಆನ್ ಲೈನ್ ನಲ್ಲಿ ಅಥವಾ ಫೇಸ್ ಬುಕ್ ನಲ್ಲಿ ಪರಿಚಯರಾದವರನ್ನು ನಂಬಿ ವ್ಯವಹಾರ ಮಾಡಲು ಮುಂದಾದರೆ ಹಣ ಕಳೆದುಕೊಳ್ಳಬೇಕಾಗುತ್ತದೆ. ಇದು ಬೆಂಗಳೂರಿನದ್ದೇ ಸ್ಟೋರಿ...

ಬೆಂಗಳೂರು[ಜು.1] ಆಕೆಗೆ ಪ್ರಾಣಿ-ಪಕ್ಷಿಗಳ ಮೇಲೆ ವಿಶೇಷ ಪ್ರೀತಿ. ಮುದ್ದಾದ ಗಿಳಿಯೊಂದನ್ನು ಸಾಕೋಣ ಎಂದು ಆನ್ ಲೈನ್ ನಲ್ಲಿ ಹುಡುಕಾಟ ನಡೆಸುತ್ತಾಳೆ.  ಕೆಲ ಮೂಲಭೂತ ಸುರಕ್ಷಾ ಕ್ರಮವನ್ನು ಮರೆತ ಮಹಿಳೆ 71 ಸಾವಿರ ರೂ. ಕಳೆದುಕೊಂಡಿದ್ದಾಳೆ!

ಹೌದು..ಬೆಂಗಳೂರು ಸರ್ಜಾಪುರ ರಸ್ತೆಯ ವಿಜಯ್ ಕುಮಾರ್ ಲೇಔಟ್ ನಿವಾಸಿ ಶ್ರೀಜಾ [32] ಹಣ ಕಳೆದುಕೊಂಡವರು. ಪೊಲೀಸರಿಗೆ ದೂರು ದಾಖಲಿಸುರುವ ಮಹಿಳೆ ಆಕೆಯ ಭಾವನೆಯೊಂದಿಗೆ ಆಟ ಆಡಿದವನನ್ನು ಹಿಡಿದುಕೊಡುವಂತೆ ದುಂಬಾಲು ಬಿದ್ದಿದ್ದಾರೆ.

ತನಗೆ ಗಿಳಿಯೊಂದನ್ನು ಸಾಕಬೇಕಿದೆ ಎಂದು ಮಹಿಳೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಇದನ್ನು ನೋಡಿದ ವಂಚಕ ತನ್ನ ಬಳಿ ಗಿಳಿಗಳಿದ್ದು ಸಂಪರ್ಕ ಮಾಡುವಂತೆ ಸಂದೇಶ ರವಾನಿಸಿದ್ದ. ಇದನ್ನು ನಂಬಿದ ಮಹಿಳೆ ಆತನಿಗೆ ಪೋನ್ ನಂಬರ್ ಸಹ ನೀಡಿ ಆನ್ ಲೈನ್ ಮೂಲಕ ಹಣ ಟ್ರಾನ್ಸ್ ಫರ್ ಮಾಡಿದ್ದಳು. ಹಣ ಕೈಗೆ ಬಂದ ತಕ್ಷಣ ವಂಚಕ ಮಹಿಳೆಯ ವಾಟ್ಸಪ್ ಮೆಸೇಜ್ ಗೆ ಉತ್ತರ ನೀಡುವುದನ್ನು ಬಂದ್ ಮಾಡಿದ್ದಾನೆ. ಅಲ್ಲದೇ ಆಕೆಯ ಕರೆ ಕೂಡ ರಿಸೀವ್ ಮಾಡಿಲ್ಲ. ಅನುಮಾನಗೊಂಡ ಮಹಿಳೆ ಅಂತಿಮವಾಗಿ ಪೊಲೀಸರ ಮೊರೆ ಹೋಗಿದ್ದಾರೆ.

click me!