ಬಿಜೆಪಿ ಶಾಸಕನ ಪುತ್ರನಿಗೆ ದಾರಿ ಬಿಡದ ಯುವಕನಿಗೆ ಥಳಿತ!

Published : Jul 01, 2018, 02:29 PM IST
ಬಿಜೆಪಿ ಶಾಸಕನ ಪುತ್ರನಿಗೆ ದಾರಿ ಬಿಡದ ಯುವಕನಿಗೆ ಥಳಿತ!

ಸಾರಾಂಶ

ಬಿಜೆಪಿ ಶಾಸಕನ ಪುತ್ರನಿಗೆ ದಾರಿ ಬಿಡದ ಯುವಕನಿಗೆ ಥಳಿತ ರಾಜಸ್ಥಾನದ ಬನ್ಸವಾಡ್ ದಲ್ಲಿ ನಡೆದ ಘಟನೆ ಬಿಜೆಪಿ ಶಾಸಕ ದಾನ್ ಸಿಂಗ್ ರಾವತ್ ಮಗ ರಾಜಾ  

ಬನ್ಸವಾಡ್(ಜು.1): ರಾಜಸ್ಥಾನದಲ್ಲಿ ಶಾಸಕನ ಮಗನಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಯುವಕನೊರ್ವನಿಗೆ ಹಿಗ್ಗಾಮುಗ್ಗಾ  ರೀತಿಯಲ್ಲಿ ಥಳಿಸಲಾಗಿದೆ. ಇಲ್ಲಿನ ಬನ್ಸವಾಡ್‌ದ ವಿದ್ಯುತ್ ಕಾಲೂನಿಯಲ್ಲಿ ಈ ಘಟನೆ ನಡೆದಿದ್ದು,  ಬಿಜೆಪಿ ಶಾಸಕ ದಾನ್ ಸಿಂಗ್ ರಾವತ್  ಮಗ ರಾಜಾ ಯುವಕನೋರ್ವನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಸ್ವೀಪ್ಟ್ ಕಾರು ತನ್ನ ಕಾರನ್ನು ಓವರ್ ಟೇಕ್ ಮಾಡುತ್ತಿರುವುದನ್ನು ಗಮನಿಸಿದ ರಾಜಾ ರಸ್ತೆಯನ್ನು ಬಂದ್ ಮಾಡಿಸಿದ್ದಾನೆ. ನಂತರ ಕಾರಿನಿಂದ ಚಾಲಕನನ್ನು ಎಳೆದು ಹಲ್ಲೆ ನಡೆಸಿದ್ದಾನೆ. ಸ್ಕಾರ್ಪಿಯೋ ವಾಹನದಿಂದ ಇಳಿದ ಅನೇಕ ಮಂದಿ ಕೂಡಾ  ಆ ಯುವಕನ  ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಶಾಸಕನ ಪುತ್ರನ ಕಾರನ್ನು ಓವರ್ ಟೇಕ್ ಮಾಡಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದ ಯುವಕ ನೀರವ್ ಉಪಾಧ್ಯಾಯ ಹೇಳಿದ್ದಾನೆ. ಈ ಘಟನೆ ನಡೆದು ಒಂದು ತಿಂಗಳು ಕಳೆದಿದ್ದರೂ ಪೊಲೀಸರು ಈವರೆಗೂ ಯಾವುದೇ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಈ ಕುರಿತು ಮಾಹಿತಿ ಇಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿ-ಪುಟಿನ್‌ ಸೆಲ್ಫಿ ತೋರಿಸಿ ಟ್ರಂಪ್‌ ವಿರುದ್ಧ ಸಂಸದೆಯ ಕಿಡಿ
ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ