ಬೆಂಗಳೂರು ರಕ್ಷಿಸಿ ಯಾತ್ರೆ; ಬೀದಿಗಿಳಿದ ಬಿಜೆಪಿ

By Suvarna Web DeskFirst Published Mar 2, 2018, 11:57 AM IST
Highlights

ಬೆಂಗಳೂರು ರಕ್ಷಿಸಿ ಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ಪ್ರಕಾಶ್ ಜಾವೇಡ್ಕರ್, ಸದಾನಂದ ಗೌಡ ಸೇರಿದಂತೆ ಪ್ರಮುಖ ಮುಖಂಡರು ಪಾಲ್ಗೊಂಡಿದ್ದಾರೆ.

ಬೆಂಗಳೂರು(ಮಾ.02): ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಪ್ರಭುತ್ವ ಸಾಧಿಸಲು ಬಿಜೆಪಿ ಹೊಸ ತಂತ್ರದೊಂದಿಗೆ ಬೀದಿಗಿಳಿದು ಬೆಂಗಳೂರು ರಕ್ಷಿಸಿ ಯಾತ್ರೆ ಮೂಲಕ ಪ್ರತಿಭಟನೆ ನಡೆಸುತ್ತಿದೆ.

ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ನಾಯಕರು ಪ್ರತಿಭಟನೆ ಆರಭಿಸಿದರು. ನಲಪಾಡ್ ಗೂಂಡಾಗಿರಿ ಸೇರಿದಂತೆ ಕಾಂಗ್ರೆಸ್ ಮುಖಂಡರ ದಬ್ಬಾಳಿಕೆಯನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಇಂದಿನಿಂದ 14 ದಿನಗಳ ಕಾಲ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕ ತಮ್ಮ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಲಿದ್ದಾರೆ. ಪ್ರತಿದಿನ ಸುಮಾರು ಮೂರು ಕಿಲೋ ಮೀಟರ್ ಪಾದಯಾತ್ರೆ ನಡೆಸಲಿರುವ ಕಾರ್ಯಕರ್ತರೊಂದಿಗೆ ಪ್ರತಿದಿನ ಒಬ್ಬೊಬ್ಬ ಕೇಂದ್ರದ ನಾಯಕರು ಭಾಗವಹಿಸಲಿದ್ದಾರೆ. ಮಾರ್ಚ್ 16ರಂದು ಬೆಂಗಳೂರು ರಕ್ಷಿಸಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ.

ಬೆಂಗಳೂರು ರಕ್ಷಿಸಿ ಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ಪ್ರಕಾಶ್ ಜಾವೇಡ್ಕರ್, ಸದಾನಂದ ಗೌಡ ಸೇರಿದಂತೆ ಪ್ರಮುಖ ಮುಖಂಡರು ಪಾಲ್ಗೊಂಡಿದ್ದಾರೆ.

click me!