ಪ್ರಧಾನಿ ಮೋದಿ, ಮಾಳವಿಕಾಗೆ ಬೆಂಗಳೂರಿನ ವಿದ್ಯಾರ್ಥಿಗಳಿಂದ ನ್ಯಾಪ್'ಕಿನ್ ರವಾನೆ

By Suvarna Web DeskFirst Published Jul 14, 2017, 4:20 PM IST
Highlights

ಸ್ಯಾನಿಟರಿ ನ್ಯಾಪ್’ಕಿನ್ ಮೇಲೆ ಶೇ.12 ರಷ್ಟು ಜಿಎಸ್’ಟಿ ವಿಧಿಸಿರುವುದು ದೇಶದಾದ್ಯಂತ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಬಸಬನಗುಡಿಯ ಬಿಎಂಎಸ್  ಕಾಲೇಜಿನ ವಿದ್ಯಾರ್ಥಿಗಳು ನ್ಯಾಪ್’ಕಿನ್ ಮೇಲೆ ಜಿಎಸ್’ಟಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಬಿಜೆಪಿ ವಕ್ತಾರೆ ಮಾಳವಿಕಾಗೆ ಪೋಸ್ಟ್ ಮೂಲಕ ನ್ಯಾಪ್’ಕಿನ್ ಕಳುಹಿಸಿ ಪ್ರತಿಭಟಿಸಿದ್ದಾರೆ.

ಬೆಂಗಳೂರು (ಜು.14): ಸ್ಯಾನಿಟರಿ ನ್ಯಾಪ್’ಕಿನ್ ಮೇಲೆ ಶೇ.12 ರಷ್ಟು ಜಿಎಸ್’ಟಿ ವಿಧಿಸಿರುವುದು ದೇಶದಾದ್ಯಂತ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಬಸಬನಗುಡಿಯ ಬಿಎಂಎಸ್  ಕಾಲೇಜಿನ ವಿದ್ಯಾರ್ಥಿಗಳು ನ್ಯಾಪ್’ಕಿನ್ ಮೇಲೆ ಜಿಎಸ್’ಟಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಬಿಜೆಪಿ ವಕ್ತಾರೆ ಮಾಳವಿಕಾಗೆ ಪೋಸ್ಟ್ ಮೂಲಕ ನ್ಯಾಪ್’ಕಿನ್ ಕಳುಹಿಸಿ ಪ್ರತಿಭಟಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಮಹಿಳೆಯರ ಸಮಸ್ಯೆ ಅರ್ಥವಾಗುವುದಿಲ್ಲ.  ಪ್ರತಿ ತಿಂಗಳು ಮಹಿಳೆಯರು ನೋವನುಭವಿಸುತ್ತಾರೆ. ಸ್ಯಾನಿಟರಿ ನ್ಯಾಪ್’ಕಿನ್ ಮೇಲೆ ಜಿಎಸ್’ಟಿ ವಿಧಿಸಿ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ದೇಶದ ಅರ್ಧದಷ್ಟು ಮಹಿಳೆಯರು ಋತುಸ್ರಾವಕ್ಕೆ ಒಳಗಾಗುತ್ತಾರೆ. ಸ್ಯಾನಿಟರಿ ನ್ಯಾಪ್’ಕಿನ್’ಗಳನ್ನು ಬಳಸುತ್ತಾರೆ. ಇದು ಮಹಿಳೆಯರಿಗೆ ಅಗತ್ಯವಾದ ವಸ್ತು. ಕೇಂದ್ರ ಸರ್ಕಾರವು ಮಹಿಳೆಯರ ಬಗ್ಗೆ ಸಂವೇದನೆಗಳನ್ನು ಕಳೆದುಕೊಂಡಿದೆ. ಸರ್ಕಾರವು ತೆರಿಗೆಯನ್ನು ತೆಗೆದು ಹಾಕಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ನ್ಯಾಪ್’ಕಿನ್ ಬದಲು ಬಟ್ಟೆಗಳನ್ನು ಬಳಸಿ ಎಂದು ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  

click me!