
ಬೆಂಗಳೂರಿನ ಓರ್ವ ಉದ್ಯೋಗಿಯು ಸೋಶಿಯಲ್ ಮೀಡಿಯಾದಲ್ಲಿ ದೀರ್ಘವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಅವರು "ಭಾರತದಲ್ಲಿ ಕಾರ್ಪೊರೇಟ್ ಗುಲಾಮನಾಗಿ ಕೆಲಸ ಮಾಡುತ್ತಿರುವುದು ಆರೋಗ್ಯ ಮತ್ತು ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ವಿವರಿಸಿದ್ದಾರೆ.
ತೂಕ ಹೆಚ್ಚಾಯ್ತು!
"ನಾನು ನಿಜವಾಗಿಯೂ ಸಾಯುತ್ತಿದ್ದೇನೆಯೇ?" ಎಂಬ ಶೀರ್ಷಿಕೆಯೊಂದಿಗೆ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. “2022 ರ ಆಗಸ್ಟ್‌ನಲ್ಲಿ ತಮ್ಮ ಪ್ರಸ್ತುತ ಕಂಪನಿಯಲ್ಲಿ ಕೆಲಸ ಆರಂಭಿಸಿದಾಗಿನಿಂದ ಇಲ್ಲಿಯವರೆಗೆ, ಸುಮಾರು 3 ವರ್ಷಗಳಲ್ಲಿ 24 kg ತೂಕ ಹೆಚ್ಚಿಸಿಕೊಂಡೆ. ದಿನಕ್ಕೆ 14 ರಿಂದ 16 ಗಂಟೆಗಳ ಕಾಲ ಕೆಲಸ ಅಥವಾ ಕೆಲಸಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಮಾಡುತ್ತೇನೆ. ನಿದ್ದೆ ಮಾಡೋದು ಮಧ್ಯರಾತ್ರಿ 2 ಗಂಟೆ ಆದರೂ ಆಯಿತು” ಎಂದು ಅವರು ಹೇಳಿದ್ದಾರೆ.
ಜೀತದಾಳು ಆಗಿರುವೆ!
“ನಿಮ್ಮಂತೆಯೇ, ನಾನೂ ಭಾರತದಲ್ಲಿ ಕಾರ್ಪೊರೇಟ್ ಜೀತದಾಳು ಆಗಿದ್ದೇನೆ, ವೃತ್ತಿಜೀವನದ ಆರಂಭದಿಂದಲೂ ಈ ಕೆಲಸದ ಸಂಸ್ಕೃತಿಯಲ್ಲಿ ಸಿಲುಕಿಕೊಂಡಿದ್ದೇನೆ. ತಡವಾಗಿ ಮಲಗಿದರೂ, ತುಂಬ ಹೊತ್ತು ಕೆಲಸ ಮಾಡಿದರೂ, ನಾನು ಯಾವಾಗಲೂ ಬೆಳಿಗ್ಗೆ 9 ಗಂಟೆಗೆ ಕಚೇರಿಗೆ ಹೋಗ್ತೀನಿ. ಕೆಲವು ರಾತ್ರಿಗಳಲ್ಲಿ ಮಧ್ಯರಾತ್ರಿ 2 ಗಂಟೆಗೆ ಮಲಗುತ್ತೇನೆ, ಕೆಲವೊಮ್ಮೆ ರಾತ್ರಿ 11 ಗಂಟೆಗೆ, ಆದರೆ ಯಾವಾಗಲೂ ಕಚೇರಿಯಲ್ಲಿ 9 ಗಂಟೆಗೆ ಇರುತ್ತೇನೆ” ಎಂದು ಅವರು ಹೇಳಿದ್ದಾರೆ.
ಪರ್ಸನಲ್ ಲೈಫ್ ಇಲ್ಲ
“ನಾನು ಸಂಪೂರ್ಣವಾಗಿ ಸುಸ್ತಾಗಿದ್ದೇನೆ ಅಂತ ನನ್ನ ತಾಯಿ ಹೇಳುತ್ತಾರೆ. ನನ್ನ ಕೆಲಸಗಳನ್ನು ಕಡೆಗಾಣಿಸದೆ, ಮೀಟಿಂಗ್‌ಗಳಲ್ಲಿ ಭಾಗವಹಿಸ್ತೀನಿ, ಗಡುವುಗಳನ್ನು ಪೂರೈಸ್ತೀನಿ, ಸಹದ್ಯೋಗಿಗಳಿಗೆ ಸಹಾಯ ಮಾಡುವೆ, ನನ್ನ ಗಡಿಯಾಚೆಯೂ ಕೆಲಸ ಮಾಡ್ತೀನಿ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದೇನೆ. ನಾನು ತುಂಬ ಕಲಿತಿದ್ದೇನೆ ಎಂದು ಗೊತ್ತಿದೆ. ನನಗೆ ಯಾವುದೇ ಪರ್ಸನಲ್ ಲೈಫ್ ಇಲ್ಲ. 2.5 ವರ್ಷಗಳಲ್ಲಿ ನಾನು ಎಲ್ಲಿಯೂ ಪ್ರಯಾಣಿಸಿಲ್ಲ, ಬೆಂಗಳೂರಿನಲ್ಲಿರುವ ನಂದಿ ಬೆಟ್ಟಕ್ಕೂ ಸಹ ಹೋಗಿಲ್ಲ. ನನ್ನ ಗೆಳತಿಯನ್ನು ತುಂಬ ನಿರ್ಲಕ್ಷಿಸಿದ್ದೇನೆ, ಆದರೂ ಅವಳು ನನ್ನ ಜೀವನದ ಏಕೈಕ ಸ್ಥಿರವಾದ, ಪಾಸಿಟಿವ್ ವಿಷಯವಾಗಿದ್ದಾಳೆ" ಎಂದು ಬರೆದಿದ್ದಾರೆ.
ಸಂಬಳ ಇದ್ರೂ ಖುಷಿ ಇಲ್ಲ
“ಹೆಚ್ಚಿನದಾಗಿ ವಾರಾಂತ್ಯಗಳಲ್ಲಿ ಕೆಲಸ ಮಾಡುವುದು, ರಜೆಗಳನ್ನು ರದ್ದುಗೊಳಿಸುವುದು, ಯಾವಾಗಲೂ ಕೆಲಸಕ್ಕೆ ಆದ್ಯತೆ ನೀಡುವುದರಿಂದ, ನಾನು ಸಂಪೂರ್ಣವಾಗಿ ಸುಸ್ತಾಗಿರುವಂತೆ ಭಾಸವಾಗುತ್ತದೆ" ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. “ಒಳ್ಳೆಯ ಸಂಬಳ ಗಳಿಸುತ್ತಿದ್ದರೂ ಕೂಡ ಒಮ್ಮೆ ಯೋಚನೆ ಮಾಡಿದಾಗ ಯಾವುದೇ ಖುಷಿಯೇ ಇಲ್ಲ ಎಂದು ಗೊತ್ತಾಗುವುದು. ನಾನು ಬ್ಯಾಲೆನ್ಸ್ ಲೈಫ್ ಲೀಡ್ ಮಾಡ್ತಿಲ್ಲ, ಬದಲಾಗಿ ನಾನು ಕೇವಲ ಆದರ್ಶ ಕಾರ್ಪೊರೇಟ್ ಗುಲಾಮನಾಗಿದ್ದೇನೆ. ಇಂಟರ್‌ವ್ಯೂಗೆ ತಯಾರಾಗಲು ಅಥವಾ ಸರಿಯಾದ ಬ್ರೇಕ್ ತೆಗೆದುಕೊಳ್ಳಲು ನನಗೆ ಸಮಯವೂ ಶಕ್ತಿಯೂ ಇಲ್ಲ. ಈಗ ನಾನು ಏನು ಮಾಡಬೇಕು? ನಾನು ನಿಜವಾಗಿಯೂ ಸಾಯುತ್ತಿದ್ದೇನೆಯೇ?" ಎಂದು ಅವರು ಹೇಳಿದ್ದಾರೆ.
ನೆಟ್ಟಿಗರು ಏನು ಹೇಳಿದ್ರು?
ಈ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಓರ್ವ ವ್ಯಕ್ತಿಯು "ನಿಮಗೆ ಬ್ರೇಕ್ ಬೇಕು. ನಿಜವಾಗಿಯೂ ಬೇಕು. ಕೆಲಸವನ್ನು ಬದಲಾಯಿಸು ಅಂತ ಹೇಳೋದಿಲ್ಲ. ಬ್ರೇಕ್ ಸಿಂಪಲ್ ಆಗಿರಬಹುದು, ಆದರೆ ಮೆಚ್ಚಿನ ಪಾನೀಯದೊಂದಿಗೆ ಸಿನಿಮಾ ನೋಡುವುದು, ಬಹುಕಾಲದ ಸ್ನೇಹಿತನನ್ನು ಭೇಟಿಯಾಗುವುದು ಅಥವಾ ಕುಟುಂಬವನ್ನು ಭೇಟಿಯಾಗುವುದು ಒಳ್ಳೆಯದು” ಎಂದು ಹೇಳಿದ್ದಾರೆ.
4 ವರ್ಷಗಳ ಹಿಂದೆ ನನಗೂ ಇದೇ ಪರಿಸ್ಥಿತಿ ಇತ್ತು, ರಜೆ ಕೇಳಿದೆ. ರಿಜೆಕ್ಟ್ ಮಾಡಿದ್ರು. 2 ತಿಂಗಳು ಅದೇ ಸ್ಥಿತಿ ಕಂಟಿನ್ಯೂ ಆಯ್ತು. ನಾನು ಸಂಪೂರ್ಣವಾಗಿ ದಣಿದಿದ್ದೆ. ಆರೋಗ್ಯ ಕೆಟ್ಟು ಎರಡು ವಾರ ಚಿಕಿತ್ಸೆ ಪಡೆದಿದ್ದೆ ಎಂದು ಇನ್ನೋರ್ವರು ಕಾಮೆಂಟ್ ಮಾಡಿದ್ದಾರೆ.
ಕುಟುಂಬ ಅಥವಾ ಗೆಳತಿಯೊಂದಿಗೆ ರಜೆ ಹಾಕಿ ಸಮಯ ಕಳೆಯಿರಿ. ಬೀಚ್ ರೆಸಾರ್ಟ್‌ಗೆ ಹೋಗಿ, ಕೇವಲ ವಿಶ್ರಾಂತಿ ಪಡೆಯಿರಿ, ಓಡಾಡಿ ಅಥವಾ ನಗರವನ್ನು ಗಮನಿಸಿ. ಈ ದಿನನಿತ್ಯದಿಂದ ಹೊರಬಂದು ರೀಚಾರ್ಜ್ ಆಗಿ ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.