ಬೆಂಗಳೂರು ವಿವಿ ಪುರಂ ಪೊಲೀಸರ ಭರ್ಜರಿ ಕಾರ್ಯಾಚರಣೆ | ಮೂವರು ಅಂತರ್ ರಾಜ್ಯ ಬೈಕ್ ಕಳ್ಳರ ಬಂಧನ | ಬುಲೆಟ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿಗಳು|
ಬೆಂಗಳೂರು, [ಮಾ.08]: ಹೊಸ ಬುಲೆಟ್ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ವಿ.ವಿ. ಪುರಂ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಆಂಬೂರ್ ಮೂಲದ ಮುನೀರ್ ಬಾಷ (20), ಎ. ಮೊಹಮದ್ ಮುಜಾಹೀದ್(25) ಮತ್ತು ಎ. ಮೋಗನ್ (19) ಬಂಧಿತರು.
undefined
ಅಪರಾಧ ಇಲ್ಲದ ಏರಿಯಾ ನಿರ್ಮಾಣಕ್ಕೆ ಅಣ್ಣಾಮಲೈ ಟಿಪ್ಸ್!
ಬುಲೆಟ್ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿಗಳಿಂದ 20 ಲಕ್ಷ ರೂ. ಬೆಲೆ ಬಾಳುವ 8 ಬುಲೆಟ್, 1 ಯಮಹಾ ಎಫ್ಜಡ್, 4 ಪಲ್ಸರ್ ಬೈಕ್ ಸೇರಿ 17 ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕಳೆದ 6 ತಿಂಗಳಿನಿಂದ ಈ ಕೃತ್ಯ ಎಸಗುತ್ತಿದ್ದರು. ತಮಿಳುನಾಡಿನಿಂದ ಬಸ್ನಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿಗಳು ಹಗಲು ಹೊತ್ತಿನಲ್ಲಿ ವಿ.ವಿ.ಪುರ ಸೇರಿ ನಗರದ ವಿವಿಧೆಡೆ ಸುತ್ತಾಡಿ ಮನೆ ಮುಂದೆ ನಿಲುಗಡೆ ಮಾಡುತ್ತಿದ್ದ ಬುಲೆಟ್ಗಳನ್ನು ಗಮನಿಸುತ್ತಿದ್ದರು.
ರಾತ್ರಿ ಹೊತ್ತು ನಕಲಿ ಕೀ ಬಳಸಿ ಬೈಕ್ ಕದ್ದು ತಮಿಳುನಾಡಿನ ಅಂಬೂರ್ಗೆ ತೆರಳುತ್ತಿದ್ದರು. ನಂತರ ಬೈಕ್ ನಂಬರ್ ಪ್ಲೇಟ್ ಬದಲಿಸಿ ಗ್ರಾಹಕರನ್ನು ಹುಡುಕುತ್ತಿದ್ದರು. ಗ್ರಾಹಕರಿಂದ 10 ರಿಂದ 15 ಸಾವಿರ ರೂ. ಮುಂಗಡ ಪಡೆಯುತ್ತಿದ್ದ ಆರೋಪಿಗಳು ಬೈಕ್ ನೀಡಿ ದಾಖಲೆಗಳನ್ನು ನಂತರ ನೀಡುವುದಾಗಿ ಹೇಳುತ್ತಿದ್ದರು.
ಇದೀಗ ಸಿಸಿಟಿವಿ ಆಧಾರಿಸಿ ಈ ಖರ್ತನಾಕ್ ಗ್ಯಾಂಗ್ ದಕ್ಷಿಣ ಡಿಸಿಪಿ ಅಣ್ಣಾಮಲೈ ಪಡೆ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.