ಭಾರತ ವಾಯುಪಡೆಯ ಮತ್ತೊಂದು ಯುದ್ಧ ವಿಮಾನ ಪತನ

By Web DeskFirst Published Mar 8, 2019, 4:33 PM IST
Highlights

ರಾಜಸ್ಥಾನದ ಬಿಕಾನೇರ್ ಬಳಿ ಭಾರತೀಯ ವಾಯುಪಡೆಯ ಮಿಗ್​-21 ವಿಮಾನ ಪತನವಾಗಿದೆ. ಇತ್ತೀಚೆಗೆ ಜಮ್ಮು-ಕಾಶ್ಮೀರದ ಬಡ್ಗಾಂಮ್​ ಜಿಲ್ಲೆಯಲ್ಲಿ ಮಿಗ್​-21 ಯುದ್ಧ ವಿಮಾನ ಪತನಗೊಂಡಿತ್ತು.

ಬಿಕಾನೇರ್ (ರಾಜಸ್ಥಾನ), [ಮಾ.08]: ರಾಜಸ್ಥಾನದ ಬಿಕಾನೇರ್ ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಮಿಗ್​-21 ವಿಮಾನ ಪತನಗೊಂಡಿದೆ.  

Visuals: MiG-21 aircraft on a routine mission crashed today after getting airborne from Nal near Bikaner. The pilot of the aircraft ejected safely. Court of inquiry will investigate the cause of the accident. pic.twitter.com/2HnWciPEB8

— ANI (@ANI)

ಅದೃಷ್ಟವಶಾತ್ ಪೈಲಟ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಯುದ್ಧ ವಿಮಾನ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ. ಆದ್ರೆ ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಇತ್ತೀಚೆಗೆ ಜಮ್ಮು-ಕಾಶ್ಮೀರದ ಬಡ್ಗಾಂಮ್​ ಜಿಲ್ಲೆಯಲ್ಲಿ ಮಿಗ್​-21 ಯುದ್ಧ ವಿಮಾನ ಪತನಗೊಂಡು, ಇಬ್ಬರು ಪೈಲಟ್​ಗಳು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು  ಮತ್ತೊಂದು ವಾಯುಪಡೆಯ ವಿಮಾನ ಪತನಗೊಂಡಿದೆ. 

click me!