
ಚೆನ್ನೈ: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಇಸ್ರೇಲ್ ದೂತಾವಾಸ ಕಚೇರಿ ಸಹಿತ ದಕ್ಷಿಣ ಭಾರತದ ಹಲವು ಜನನಿಭಿಡ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಸಂಚು ರೂಪಿಸಿದ್ದ ಆರೋಪಿ, ಶ್ರೀಲಂಕಾದಲ್ಲಿ ನಿಯೋಜಿತನಾಗಿದ್ದ ಪಾಕಿಸ್ತಾನ ರಾಯಭಾರಿ ವಿರುದ್ಧ ಎನ್‌ಐಎ, ತಮಿಳುನಾಡಿನ ವಿಶೇಷ ಕೋರ್ಟ್‌ನಲ್ಲಿ ದೋಷಾರೋಪ ದಾಖಲಿಸಿದೆ.
2014ರಲ್ಲಿ ಶ್ರೀಲಂಕಾದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿದ್ದ ಅಮೀರ್ ಜುಬೇರ್ ಸಿದ್ದೀಕಿ ಮತ್ತು ಆತನ ಸಂಚಿನಲ್ಲಿ ಭಾಗೀದಾರಿಗಳಾಗಿದ್ದ ಇಬ್ಬರ ವಿರುದ್ಧ ದೋಷಾರೋಪ ದಾಖಲಾಗಿದೆ. ಸ್ಫೋಟದ ಸಂಚಿನ ಜೊತೆಗೆ ಭಾರತದಲ್ಲಿ ನಕಲಿ ಕರೆನ್ಸಿ ಹರಡುವ ಜಾಲವನ್ನೂ ಜುಬೇರ್ ರೂಪಿಸಿದ್ದ. 2012ರಲ್ಲಿ ತಮಿಳುನಾಡಿನ ತಿರುಚಿಯಲ್ಲಿ ತಂಜಾವೂರಿನ ತಮೀಮ್ ಅನ್ಸಾರಿ ಎಂಬಾತನನ್ನು ಬಂಧಿಸಿದಾಗ, ಸಿದ್ದಿಕಿ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಜನರನ್ನು ಪ್ರಚೋದಿಸುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.