ಕೊನೆಗೂ ಲೋಕಪಾಲರ ನೇಮಕಕ್ಕೆ ಮುಹೂರ್ತ

By Suvarna Web DeskFirst Published Feb 24, 2018, 9:03 AM IST
Highlights

ದೇಶಾದ್ಯಂತ ದೊಡ್ಡಮಟ್ಟದ ಆಂದೋಲನಕ್ಕೆ ಕಾರಣವಾಗಿದ್ದ ಲೋಕಪಾಲ ರಚನೆ ಮತ್ತು ಲೋಕಪಾಲ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿಬಂದಂತೆ ಕಾಣುತ್ತಿದೆ.

ನವದೆಹಲಿ : ದೇಶಾದ್ಯಂತ ದೊಡ್ಡಮಟ್ಟದ ಆಂದೋಲನಕ್ಕೆ ಕಾರಣವಾಗಿದ್ದ ಲೋಕಪಾಲ ರಚನೆ ಮತ್ತು ಲೋಕಪಾಲ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿಬಂದಂತೆ ಕಾಣುತ್ತಿದೆ. ಲೋಕಪಾಲರನ್ನು ನೇಮಿಸುವ ಸಂಬಂಧ ಮಾಚ್‌ರ್‍ 1ರಂದು ಲೋಕಪಾಲ ನೇಮಕ ಸಮಿತಿಯ ಸಭೆ ನಡೆಯಲಿದೆ ಎಂದು ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರಿ ಆಡಳಿತ ಯಂತ್ರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಲೋಕಪಾಲರ ನೇಮಕದಲ್ಲಿ ಆಗುತ್ತಿರುವ ವಿಳಂಬ ಪ್ರಶ್ನಿಸಿ ‘ಕಾಮನ್‌ ಕಾಸ್‌’ ಎಂಬ ಸ್ವಯಂಸೇವಾ ಸಂಸ್ಥೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಶುಕ್ರವಾರ ನ್ಯಾಯಾಲಯಕ್ಕೆ ಉತ್ತರ ನೀಡಿದ ಸರ್ಕಾರ, ಮಾಚ್‌ರ್‍ 1ರಂದು ನೇಮಕ ಕುರಿತಂತೆ ಚರ್ಚೆ ನಡೆಯಲಿದೆ ಎಂದರು.

ಲೋಕಪಾಲ ನೇಮಕ ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಾಧೀಶ ನ್ಯಾ.ದೀಪಕ್‌ ಮಿಶ್ರಾ, ಸಂಸತ್ತಿನ ಉಭಯ ಸದನಗಳ ಪ್ರತಿಪಕ್ಷದ ನಾಯಕರು ಸದಸ್ಯರಗಿದ್ದಾರೆ. ಈ ನಡುವೆ, ಲೋಕಪಾಲ ನೇಮಕ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ತನಗೆ ವಿವರಗಳನ್ನು ಸಲ್ಲಿಸಬೇಕು ಎಂದು ನ್ಯಾಯಪೀಠವು ಸರ್ಕಾರಕ್ಕೆ ಸೂಚಿಸಿದೆ.

click me!