ಭತ್ತದ ತಳಿ ಬಗ್ಗೆ ವೈದ್ಯರ ಮಾತು, ಮೇಸ್ಟ್ರಿಂದ ಶಹಭಾಸ್ ಪಡಕೊಂಡ ಡಾಕ್ಟರ್!

By Web DeskFirst Published Dec 18, 2018, 4:39 PM IST
Highlights

ಕಲಾಪದಲ್ಲಿ ಡಾಕ್ಟರ್ ಭತ್ತದ ತಳಿ ಬಗ್ಗೆ ಮಾತನಾಡಿದ್ದಾರೆ. ಸದಾ ಪಾಠ ಹೇಳುತ್ತಿದ್ದ ಸ್ಪೀಕರ್ ರಮೇಶ್ ಕುಮಾರ್ ಅವರಿಂದ ಶಹಭಾಸ್ ಸಹ ಪಡೆದುಕೊಂಡಿದ್ದಾರೆ.

ಬೆಳಗಾವಿ[ಡಿ.18]  ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ ಪುತ್ರ ವರುಣಾ ಕ್ಷೇತ್ರದ ಶಾಸಕ  ಡಾ. ಯತೀಂದ್ರಗೆ ಮೇಸ್ಟ್ರಿಂದ ಭೇಷ್ ಎನ್ನಿಸಿಕೊಂಡಿದ್ದಾರೆ.

ವರುಣಾ ಕ್ಷೇತ್ರದ ಜ್ಯೋತಿ ತಳಿ ಭತ್ತ ಖರೀದಿಗೆ ಅನುಮತಿ ನೀಡುವಂತೆ ಪ್ರಸ್ತಾಪ ಇಟ್ಟಿದ್ದಾರೆ. ಶೂನ್ಯವೇಳೆಯಲ್ಲಿ ಯತೀಂದ್ರ ವಿಷಯ ಪ್ರಸ್ತಾಪ ಮಾಡಿದರು.  ಆಗ ಸ್ಪೀಕರ್ ರಮೇಶ್ ಕುಮಾರ್ ‘ಏನ್ರೀ ಡಾಕ್ಟರ್, ನೀವು ಬಹಳ ಚೆನ್ನಾಗಿ ಮಾತಾಡ್ತೀರಾ..  ಗುಡ್.. ಇಷ್ಟು ದಿನ ಏಕೆ ನೀವು ಮಾತಾಡ್ತಾ ಇರಲಿಲ್ಲ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ  ಯತೀಂದ್ರ, ಸರಿಯಾದ ಅವಕಾಶ ಸಿಕ್ಕಿರಲಿಲ್ಲ ಎಂದರು. ಮುಂದುವರಿದ ರಮೇಶ್ ಕುಮಾರ್  ’ಕಾಯಂ ಸದನದಲ್ಲಿ ಕುಳಿತುಕೊಳ್ಳಿ..ಸದನದ ನಿಯಮಾವಳಿ ಪುಸ್ತಕ ಓದಿಕೊಳ್ಳಿ’ ಅಂತ ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ  ಬಳಿಕ ಕೃಷಿ ಸಚಿವ ಶಿವಶಂಕರ್ ರೆಡ್ಡಿ, ಜ್ಯೋತಿ ತಳಿ ಭತ್ತ ಖರೀದಿ ಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

 

 

 

click me!