ತಾಳಿ ಮಾರಿ ಫೈನಾನ್ಸ್ ಸಾಲ ತೀರಿಸಿದ ಮಹಿಳೆಯರು

By Suvarna web DeskFirst Published Dec 8, 2016, 3:10 PM IST
Highlights

ನೋಟ್​ಬ್ಯಾನ್​ನಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಸಾಲ ಸೋಲ ಮಾಡಿ ಜೀವನ ಮಾಡುತ್ತಿದ್ದವರಿಗೆ ಕೂಲಿ ಕೆಲಸ ಮಾಡಿ ಸಾಲ ಪಾವತಿ ಮಾಡೋಕೆ ಈಗ ಕೈಗೆ ಕೆಲಸವೇ ಇಲ್ಲ. ಹಾಗಾಗಿ ಅವರ ಪಾಡು ಹೇಳತೀರದು.

ಬೆಳಗಾವಿ (ಡಿ.08): ನೋಟ್​ಬ್ಯಾನ್​ನಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಸಾಲ ಸೋಲ ಮಾಡಿ ಜೀವನ ಮಾಡುತ್ತಿದ್ದವರಿಗೆ ಕೂಲಿ ಕೆಲಸ ಮಾಡಿ ಸಾಲ ಪಾವತಿ ಮಾಡೋಕೆ ಈಗ ಕೈಗೆ ಕೆಲಸವೇ ಇಲ್ಲ. ಹಾಗಾಗಿ ಅವರ ಪಾಡು ಹೇಳತೀರದು.

ಬೆಳಗಾವಿಯಲ್ಲಿ  ಫೈನಾನ್ಸ್​ ಕಂಪನಿಗಳ ಬೆದರಿಕೆಗೆ ಹಾಗೂ ಮರ್ಯಾದೆಗೆ ಅಂಜಿದ ಮಹಿಳೆಯರು ತಮ್ಮ  ತಾಳಿ ಮಾರಿ ಸಾಲ ಮರುಪಾವತಿಸುತ್ತಿದ್ದಾರೆ. ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿನ ಮಹಿಳೆಯರು ಕೆಲ ಫೈನಾನ್ಸ್‌ ಕಂಪನಿಗಳಿಂದ ಸಾಲ ಪಡೆದಿದ್ದರು. ಈಗ 500, 1000 ರೂಪಾಯಿ ನೋಟ್​ಬ್ಯಾನ್​ ಆಗಿದ್ದರಿಂದ ಮಹಿಳೆಯರಿಗೆ ಕೂಲಿ ಕೆಲಸ ಸಿಗುತ್ತಿಲ್ಲ.

ಆದರೆ ಫೈನಾನ್ಸ್ ನವರು  ಮಾತ್ರ ಸಾಲದ ಹಣ ವಾಪಸ್​ ನೀಡುವಂತೆ ಪೀಡಿಸುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಾರಂತೆ.  ಹೀಗಾಗಿ ಕೆಲ ಮಹಿಳೆಯರು ಮರ್ಯಾದೆಗೆ ಅಂಜಿ ಮಂಗಳಸೂತ್ರ, ಚಿನ್ನಾಭರಣಗಳನ್ನ ಮಾರಾಟ ಮಾಡಿ ಸಾಲ ತುಂಬುತ್ತಿದ್ದಾರೆ. ಈ ವಿಚಾರ ಈಗ ಬೆಳಗಾವಿ ಡಿಸಿ ಕಚೇರಿಗೂ ತಲುಪಿದೆ.

 

click me!