ಬೆಂಗಳೂರಿನ ಬಾರ್, ರೆಸ್ಟೋರೆಂಟ್'ಗಳಲ್ಲಿ ಧೂಮಪಾನ ನಿಷೇಧ

By Web DeskFirst Published Aug 29, 2018, 8:25 PM IST
Highlights

ಬೆಂಗಳೂರನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದಿಂದ ಈ ಆದೇಶ ಜಾರಿಗೊಳಿಸಲಾಗಿದೆ. ಅಕ್ರಮವಾಗಿ ಧೂಮಪಾನ ವಲಯವನ್ನು ನಿರ್ಮಿಸಿಕೊಂಡವರು ಕೂಡಲೇ ತೆರವುಗೊಳಿಸಬೇಕು. ತೆರವುಗೊಳಿಸದ ಬಾರ್, ರೆಸ್ಟೋರೆಂಟ್ ಹಾಗೂ ಪಬ್'ಗಳ ಪರವಾನಗಿಯನ್ನು ಕೂಡಲೇ ರದ್ದುಗೊಳಿಸಲಾಗುವುದು

ಬೆಂಗಳೂರು[ಆ.29]: ನಗರದ ಬಾರ್ ಮತ್ತು ರೆಸ್ಟೋರೆಂಟ್, ರಸ್ತೆ ಬದಿಯ ಅಂಗಡಿಗಳಲ್ಲಿ ತಂಬಾಕು ಪದಾರ್ಥಗಳ ಸೇವನೆ ಮತ್ತು ಧೂಮಪಾನವನ್ನು ಬಿಬಿಎಂಪಿ ಕಟ್ಟು ನಿಟ್ಟಾಗಿ ನಿಷೇಧಿಸಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಮೇಯರ್ ಸಂಪತ್ ರಾಜ್  ಕಟ್ಟುನಿಟ್ಟಾಗಿ ನಿಷೇಧಗೊಳಿಸುವ ನಿರ್ಧಾರವನ್ನು ಪಾಲಿಕೆ ಸಭೆಯಲ್ಲಿ ಕೈಗೊಂಡು ಸುತ್ತೋಲೆ ಹೊರಡಿಸಿದ್ದಾರೆ.

ಕರ್ನಾಟಕ ದೂಮಪಾನ ನಿಷೇದ  ಕಾಯ್ದೆ ಅಡಿಯಲ್ಲಿ ಅನಧಿಕೃತವಾಗಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮೇಯರ್ ಸಂಪತ್ ರಾಜ್ ಮಾತನಾಡಿ, ಬೆಂಗಳೂರನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದಿಂದ ಈ ಆದೇಶ ಜಾರಿಗೊಳಿಸಲಾಗಿದೆ. ಅಕ್ರಮವಾಗಿ ಧೂಮಪಾನ ವಲಯವನ್ನು ನಿರ್ಮಿಸಿಕೊಂಡವರು ಕೂಡಲೇ ತೆರವುಗೊಳಿಸಬೇಕು. ತೆರವುಗೊಳಿಸದ ಬಾರ್, ರೆಸ್ಟೋರೆಂಟ್ ಹಾಗೂ ಪಬ್'ಗಳ ಪರವಾನಗಿಯನ್ನು ಕೂಡಲೇ ರದ್ದುಗೊಳಿಸಲಾಗುವುದು. ಕಾನೂನಿನ ಅನ್ವಯ ರಚಿಸಿಕೊಂಡವರು ತಂಬಾಕು ನಿಯಂತ್ರಣ ಕೋಶದ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ' ಎಂದು ತಿಳಿಸಿದರು.

ನಗರದಲ್ಲಿ  ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್'ಗಳಲ್ಲಿ ಶೇ.14 ರಷ್ಟು ಧೂಮಪಾನ ಸೇವಿಸುತ್ತಾರೆ. ಶೇ.24 ರಷ್ಟು ಮಂದಿ ಕೇವಲ ಹೊಗೆ ಸೇವನೆಯಿಂದಲೇ ಕಾಯಿಲೆಗೆ ತುತ್ತಾಗುತ್ತಿದ್ದಾರೆ.  

click me!